ಸಾರಾಂಶ
Case filed against Dalit Sena's Yalasangi: Demand probe
ಯಾದಗಿರಿ: ದಲಿತ ಸೇನೆಯ ರಾಜ್ಯಾಧ್ಯಕ್ಷ ಮತ್ತು ನ್ಯಾಯವಾದಿ ಹಣಮಂತ ಜಿ. ಯಳಸಂಗಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿ ಅವರ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಗುಲಬರ್ಗಾ ರೌಡಿ ಪಡೆಯನ್ನು ಬಂಧಿಸಿ, ಕೂಲಂಕುಶ ತನಿಖೆ ಮಾಡಬೇಕೆಂದು ಆಗ್ರಹಿಸಿ, ದಲಿತ ಸೇನೆಯ ಜಿಲ್ಲಾಧ್ಯಕ್ಷ ಅಶೋಕ ಹೊಸಮನಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ದಲಿತ ಸೇನೆಯ ರಾಜ್ಯ ವಿದ್ಯಾರ್ಥಿ ಒಕ್ಕೂಟ ಉಪಾಧ್ಯಕ್ಷ ರಂಗನಾಥ ಗುಂಡುಗುರ್ತಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಮನೋಜ್ ಕುರಕುಂದ, ವಡಗೇರಾ ತಾಲೂಕಾಧ್ಯಕ್ಷ ಅಯ್ಯಪ್ಪ ಗೊಂದೇನೂರ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ತೇಜು ಹೊಸಮನಿ, ಸಂತೋಷ ಯಕ್ತಪುರ, ಮೌನೇಶ್ ನಾಯಕ, ಮರಲಿಂಗ ಗುಡಿಮನಿ, ಅಮರೇಶ ಬೋದನೂರ, ಜುಮ್ಮಣ್ಣ ಕಟ್ಟಿಮನಿ ಇದ್ದರು.-----
12ವೈಡಿಆರ್14: ದಲಿತ ಸೇನೆಯ ರಾಜ್ಯಾಧ್ಯಕ್ಷರು ಮತ್ತು ನ್ಯಾಯವಾದಿಗಳಾದ ಹಣಮಂತ ಜಿ. ಯಳಸಂಗಿ ಅವರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ದಲಿತ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.