ಕಳ್ಳನ ಬಂಧನ: ನಗದು, 4 ಬೈಕ್‌ಗಳ ವಶ

| Published : Jun 04 2024, 12:31 AM IST

ಸಾರಾಂಶ

ಬೈಕ್ ಕಳವು ಮಾಡುತ್ತಿದ್ದ ಓರ್ವನನ್ನು ಬಂಧಿಸಿರುವ ದಾವಣಗೆರೆ ಪೊಲೀಸರು, ₹1.60 ಲಕ್ಷ ಮೌಲ್ಯದ 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಹೊಸನಾಯಕನಹಳ್ಳಿ ಗ್ರಾಮದ ಫಣಿರಾಜ (26) ಬಂಧಿತ ಆರೋಪಿ.

ದಾವಣಗೆರೆ: ಬೈಕ್ ಕಳವು ಮಾಡುತ್ತಿದ್ದ ಓರ್ವನನ್ನು ಬಂಧಿಸಿರುವ ಪೊಲೀಸರು, ₹1.60 ಲಕ್ಷ ಮೌಲ್ಯದ 4 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಹೊಸನಾಯಕನಹಳ್ಳಿ ಗ್ರಾಮದ ಫಣಿರಾಜ (26) ಬಂಧಿತ ಆರೋಪಿ. ಬಾತಿ ಕೆರೆ ಹತ್ತಿರದ ಡಾಬಾದಲ್ಲಿ ಊಟ ಮುಗಿಸಿಕೊಂಡು ಬರುವಷ್ಟರಲ್ಲಿ ಬೈಕ್ ಕಳವಾಗಿದೆ ಎಂದು ಜಿಎಂಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಮಾ.23ರಂದು ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ್, ಜಿ.ಮಂಜುನಾಥ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್, ಪಿಐ ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಪ್ರಕರಣದಲ್ಲಿ ಕಳುವಾಗಿದ್ದ ಬೈಕ್ ಸೇರಿದಂತೆ ದಾವಣಗೆರೆ ಶಾಮನೂರು ರಸ್ತೆ, ತ್ಯಾವಣಿಗೆ ಮತ್ತು ಶಿವಮೊಗ್ಗದ ವಿದ್ಯಾನಗರದಲ್ಲಿ ಕಳುವಾಗಿದ್ದ ₹1,60,000 ಬೆಲೆ ಬಾಳುವ ಒಟ್ಟು 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.