ಸಾರಾಂಶ
ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ 7ಮಂದಿ ಆರೋಪಿತರ ವಿರುದ್ಧ ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಪಾವಗಡ: ಕೆರೆ ಹುಳೆತ್ತುವ ಕೆಲಸಕ್ಕೆ ನಿಯಮ ಉಲ್ಲಂಘಿಸಿ ಜೆಸಿಬಿ ಯಂತ್ರದಿಂದ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದನ್ನು ತಡೆದಿದ್ದ ಹಿನ್ನೆಲೆಯಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆಯ ಕೂಲಿಕಾರರು ನೀಡಿದ ದೂರಿಗೆ ಸಂಬಂಧಪಟ್ಟಂತೆ ಸೋಮವಾರ ತಾಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ 7ಮಂದಿ ಆರೋಪಿತರ ವಿರುದ್ಧ ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ತಾಲೂಕು ಕೋಟಗುಡ್ಡ ಗ್ರಾಮದ ಕೆರೆಯಲ್ಲಿ ಪ್ರಭಾವಿಗಳು ಜೆಸಿಬಿ ಯಂತ್ರದಿಂದ ಹುಳೆತ್ತುವ ಕೆಲಸ ನಿರ್ವಹಿಸುತ್ತಿದ್ದ ವಿಚಾರವಾಗಿ ಇದೇ ಗ್ರಾಮದ 20ಕ್ಕಿಂತ ಹೆಚ್ಚು ಮಂದಿ ಕೂಲಿಕಾರರು ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರ ಬಳಕೆಯ ಕಾಮಗಾರಿ ತಡೆವೊಡಿದ್ದರು. ಘಟನೆ ಸಂಬಂಧಪಟ್ಟಂತೆ ದೂರು ಸ್ವೀಕರಿಸಿರುವ ಪೊಲೀಸರು , ರಾಘವೇಂದ್ರ, ಅಕ್ಷಯ ಹಾಗೂ ಇವರಿಗೆ ಕುಮ್ಮಕ್ಕು ನೀಡಿದ ಈರಣ್ಣ, ಉಮಾಪತಿ ಚಿತ್ತಪ್ಪ, ಹನುಮಂತರಾಯಪ್ಪ ಸೇರಿ ಒಟ್ಟು 7ಮಂದಿ ಆರೋಪಿತರ ವಿರುದ್ಧ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಬೆಳಿಗ್ಗೆ 11ಗಂಟೆಗೆ ಕೋಟಗುಡ್ಡ ಗ್ರಾಮದ 50ಕ್ಕಿಂತ ಹೆಚ್ಚು ಕೂಲಿಕಾರರು ಪಾವಗಡ ಪಟ್ಟಣಕ್ಕೆ ಆಗಮಿಸಿ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.