ಸಾರಾಂಶ
Caste census report should not be released: Shambhu Urekondi
ದಾವಣಗೆರೆ:ಕೇಂದ್ರ ಸರ್ಕಾರದಿಂದ ಹೊಸಜಾತಿ ಗಣತಿ ನಡೆಯುವವರೆಗೂ ರಾಜ್ಯ ಸರ್ಕಾರದ ಜಾತಿಗಣತಿ ವರದಿ ಜಾರಿಗೊಳಿಸದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಗ್ರಹಿಸಿದೆ.
ರಾಜ್ಯದಲ್ಲಿ ತೀವ್ರಗೊಂದಲ ಮೂಡಿಸಿರುವ ಕಾಂತರಾಜ್ ಸಮೀಕ್ಷೆ ವರದಿಯು ನಿಖರ ಅಂಕಿ ಅಂಶ ನೀಡುವಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ 2ಕೋಟಿಗೂ ಅಧಿಕವಿರುವ ವೀರಶೈವ ಲಿಂಗಾಯತ ಸಮಾಜವನ್ನು ಉಪಜಾತಿಗಳ ಹೆಸರಿನಲ್ಲಿ ಒಡೆದು ಹಾಕಿ 70 ಲಕ್ಷ ಜನಸಂಖ್ಯೆಗೆ ಸೀಮಿತಗೊಳಿಸಿರುವುದನ್ನು ಪತ್ರಿಕಾ ಹೇಳಿಕೆಯಲ್ಲಿ ತಾ. ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ ಖಂಡಿಸಿದ್ದಾರೆ.ರಾಜ್ಯ ಸರ್ಕಾರ ಕೂಡಲೇ ಜಾತಿಗಣತಿ ವರದಿ ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶೀಘ್ರದಲ್ಲಿಯೇ ಮಹಾಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಸಮುದಾಯದ ಹರ-ಗುರು ಚರಮೂರ್ತಿಗಳ ಸಭೆ ನಡೆಸಿ ಮಹಾಸಭಾ ನಿರ್ಣಯ ಕೈಗೊಂಡು ಜಾತಿ ಕಾಲಂನಲ್ಲಿ ಏನೆಂದು ಬರೆಸಬೇಕೆಂದು ತಿಳಿಸಲಿದೆ ಎಂದು ತಿಳಿಸಿದ್ದಾರೆ.