ಜಾತಿ ವಿವಾದ: ಶಾಸಕ ಕೊತ್ತೂರು ಮಂಜುನಾಥ್‌ ಅರ್ಜಿ ತಿರಸ್ಕೃತ

| Published : Dec 22 2023, 01:30 AM IST

ಜಾತಿ ವಿವಾದ: ಶಾಸಕ ಕೊತ್ತೂರು ಮಂಜುನಾಥ್‌ ಅರ್ಜಿ ತಿರಸ್ಕೃತ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ವೇಳೆ ಕೊತ್ತೂರು ಮಂಜುನಾಥ್‌ ಸಲ್ಲಿಸಿದ್ದ ಜಾತಿ ಪತ್ರ ಅಸಿಂಧು, ಜಿಲ್ಲಾ ಮಟ್ಟದ ಜಾತಿ ಸಿಂಧುತ್ವ ಸಮಿತಿ ವರದಿಯನ್ನು ಎತ್ತಿಹಿಡಿದ ರಾಜ್ಯ ಉಚ್ಚನ್ಯಾಯಾಲ. ಕೊತ್ತೂರು ಮಂಜುನಾಥ್ ಬುಡ್ಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿಲ್ಲ ಎಂದು ವರದಿ

ಕನ್ನಡಪ್ರಭ ವಾರ್ತೆ ಕೋಲಾರಶಾಸಕ ಕೊತ್ತೂರು ಮಂಜುನಾಥ್ ಈ ಹಿಂದೆ ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಉಂಟಾಗಿದ್ದ ಜಾತಿ ಪ್ರಮಾಣಪತ್ರ ವಿವಾದ ಕುರಿತಂತೆ ಕೋಲಾರದ ಹಿಂದಿನ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಕಳೆದ ೨೦೨೧ರಲ್ಲಿ ನೀಡಿದ್ದ ಜಿಲ್ಲಾ ಮಟ್ಟದ ಜಾತಿ ಸಿಂಧುತ್ವ ಸಮಿತಿ ವರದಿಯನ್ನು ರಾಜ್ಯ ಉಚ್ಚನ್ಯಾಯಾಲಯ ಎತ್ತಿಹಿಡಿದಿದೆ. ಇದರಿಂದಾಗಿ ಕೊತ್ತೂರು ಕಾನೂನು ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.

ಕೊತ್ತೂರು ಮಂಜುನಾಥ್ ಬುಡ್ಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿಲ್ಲ ಎಂದು ಜಾತಿ ಸಿಂಧುತ್ವ ಸಮಿತಿ ನೀಡಿದ್ದ ವರದಿಯನ್ನು ಕೊತ್ತೂರು ಮಂಜುನಾಥ್ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ರಿಟ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಚುನಾವಣೆ ವೇಳೆ ಕೊತ್ತೂರು ಸುಳ್ಳು ಜಾತಿಪತ್ರ ಸಲ್ಲಿಸುರುವ ಬಗ್ಗೆ ಪರಾಜಿತ ಅಭ್ಯರ್ಥಿ ಮುನಿಆಂಜನಪ್ಪ ಮತ್ತು ಇತರರು ಉಚ್ಚ ನ್ಯಾಯಾಲಯದಲ್ಲಿ ಚುನಾವಣಾ ತಕಾರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್‌ ೨೦೧೮ರಲ್ಲಿ ತೀರ್ಪು ನೀಡಿ ಮಂಜುನಾಥ್ ಬುಡ್ಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿರುವುದನ್ನು ಸಾಭೀತುಪಡಿಸಿಲ್ಲ ಎಂದು ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿತ್ತು,

ಈ ತೀರ್ಪಿನ ವಿರುದ್ಧ ಕೊತ್ತೂರು ಸುಪ್ರೀಂ ಕೋರ್ಟ್‌ಗೆ ಮೊರೆಹೋಗಿದ್ದರು. ಸುಪ್ರೀಂ ಕೋರ್ಟ್ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ನೀಡಿದ್ದ ವರದಿ ಎತ್ತಿಹಿಡಿದು ಕೊತ್ತೂರು ಮಂಜುನಾಥ್ ಮೇಲ್ಮನವಿ ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಕೊತ್ತೂರು ಮತ್ತೆ ಹೈಕೋರ್ಟ್‌ಗೆ ಸಲ್ಲಿಸಿದ್ದರು.