ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ನೀತಿ ರಾಜಕಾರಣ ಮಾಡಿದರೆ ಮಾತ್ರ ದೇಶ ಉಳಿಯುತ್ತದೆ. ಜಾತಿ ರಾಜಕಾರಣದಿಂದ ದೇಶ ಉಳಿಯುವುದಿಲ್ಲ. ಆದರೆ, ಕಾಂಗ್ರೆಸ್ ಮಾಡುತ್ತಿರುವುದು ಜಾತಿ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಸೋಮವಾರ ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕಾರಣಕ್ಕೆ ಬಂದ ನಾವು ಹಿಂದುತ್ವ ಮಾಡಿಲ್ಲ. ಹಿಂದುತ್ವಕ್ಕೆ ಬಂದು ರಾಜಕಾರಣ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಯಾರಿಗೂ ಮೋಸ ಮಾಡಿಲ್ಲ. ದೇಶದ ಭಕ್ತರಿಗೆ ಮೋದಿ ಹಿರೋನೇ. ಮೋದಿ ಜನಪ್ರಿಯ ಯೋಜನೆಗಳು ಪ್ರತಿಯೊಬ್ಬರಿಗೆ ತಲುಪಿವೆ ಎಂದು ಸಮರ್ಥಿಸಿಕೊಂಡರು.
ದೇಶದಲ್ಲಿ ಭಯೋತ್ಪಾದನೆ ಬೆಳೆಯುವುದಕ್ಕೆ ಕಾಂಗ್ರೆಸ್ ಕಾರಣ. ಬಾಂಬ್ ಇಟ್ಟವರಿಗೆ ಕಾಂಗ್ರೆಸ್ ನಾಯಕರು ಬ್ರದರ್ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಗ್ಯಾರಂಟಿ ಯೋಜನೆ ಮೂಲಕ ಜನರನ್ನು ಹರಕೆ ಕುರಿ ಮಾಡಿ ದೇಶ ಹಾಳು ಮಾಡುತ್ತಿದ್ದಾರೆ ಎಂದು ಕುಟುಕಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ. ದೇಶ ಧರ್ಮ ಉಳಿಯಲು ನರೇಂದ್ರ ಮೋದಿ ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಮತ್ತು ಸಂವಿಧಾನ ತೆಗೆದು ಹಾಕಲಾಗುತ್ತದೆ ಎಂದು ಕಾಂಗ್ರೆಸ್ ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಮೀಸಲಾತಿ ಕೊಡಬೇಕು ಎಂದು ನಾನು ಹೊರಾಟ ಮಾಡಿದ್ದೇನೆ ಎಂದರು.ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ. ದೇಶದ ಸುರಕ್ಷೆತೆಗಾಗಿ ಬಿಜೆಪಿ ಬೆಂಬಲಿಸುವುದು ಮುಖ್ಯವಾಗಿದೆ. ಹಿಂದಿನ ಸರ್ಕಾರ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಕೇವಲ 10 ವರ್ಷಗಳಲ್ಲಿ ಮಾಡಿದೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಶೂನ್ಯವಾಗಿದೆ. ಶಾಸಕರಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡೋದು ಬೇಡ ಎಂದು ಹೇಳಿದರು.
ಹುಕ್ಕೇರಿ ಶಾಸಕ ನಿಖಿಲ ಕತ್ತಿ, ದೇಶದ ಭವಿಷ್ಯ ಮತ್ತು ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು..ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ. ವಿಕಷಿತ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುವ ಮೂಲಕ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ ನೀಡಬೇಕು ಎಂದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ. ಕೃಷಿ ಸಮ್ಮಾನ್ ಯೋಜನೆಯ ಮೂಲಕ ಬಿಜೆಪಿ ಸರ್ಕಾರ ₹ 4 ಸಾವಿರ ಹಣ ನೀಡುತ್ತಿತ್ತು. ಆದರೆ, ಈಗ ಹಣ ಬಂದು ಮಾಡಿದೆ. ಅದನ್ನು ಪ್ರಶ್ನಿಸುವ ಕೆಲಸ ಆಗಬೇಕು ಎಂದು ಹೇಳಿದರು.ಐದು ವರ್ಷದಲ್ಲಿ 650 ಹಳ್ಳಿಯಲ್ಲಿ 500ಕ್ಕೂ ಅಧಿಕ ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಿದ್ದೇನೆ. ಕೋವಿಡ್ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಅನುದಾನ ಕಡಿಮೆ ಆಗಿದೆ. ಅದರಲ್ಲೂ ರೈಲ್ವೆ. ಹೆದ್ದಾರಿ ಅಭಿವೃದ್ಧಿ ಮಾಡಲಾಗಿದೆ. ಜಲಜೀವನ್ ಮಿಷನ್ ಮೂಲಕ ನಳ ಜೋಡಣೆ ಮಾಡುವ ಯೋಜನೆ ಸಮರ್ಪಕ ಅನುಷ್ಠಾನ ಮಾಡಲಾಗಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ನನಗೆ ಅವಕಾಶ ಕೊಡಬೇಕು.- ಅಣ್ಣಾಸಾಹೇಬ ಜೊಲ್ಲೆ ಬಿಜೆಪಿ ಅಭ್ಯರ್ಥಿ