ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ‘ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ’ (ಪಿಆರ್‌ಸಿ) ವಿತರಣೆ ಕಾರ್ಯಕ್ಕೆ ಗುರುವಾರದಿಂದ ಚಾಲನೆ ನೀಡಲಾಗಿದ್ದು, ಮೊದಲ ದಿನ 1,500 ರಷ್ಟು ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ.

ಜುಲೈ 20 ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕಂದಾಯ ಇಲಾಖೆಯಿಂದ ರಾಜ್ಯದ ಅರ್ಹ ನಾಗರಿಕರು ಎಸ್‌ಐಆರ್‌ನ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಗೆ ಸೇರಲು ಅತ್ಯವಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯಾಗಿರುವ ನಿವಾಸಿ ದೃಢಿಕರಣ ಪ್ರಮಾಣದ ಜೊತೆಗೆ ಆಯಾ ಜನರ ಜಾತಿ ಪ್ರಮಾಣ ಪತ್ರ ಉಚಿತವಾಗಿ ಮನೆ ಬಾಗಿಲಿಗೆ ನೀಡುವುದಕ್ಕೆ ಚಾಲನೆ ನೀಡಿದ್ದರು.

ಅದರಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಕಳೆದ 10 ದಿನದಲ್ಲಿ ಆಯಾ ಜನರ ಜಾತಿ ಪ್ರಮಾಣ ಪತ್ರ ಮುದ್ರಿಸಿಕೊಂಡು ಗುರುವಾರದಿಂದ ಮನೆ ಮನೆ ತೆರಳಿ ವಿತರಣೆಗೆ ಚಾಲನೆ ನೀಡಲಾಗಿದೆ. ಇನ್ನೂ ಶಾಶ್ವತ ನಿವಾಸಿ ದೃಢೀಕರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿದವರಿಗೆ ಮಾತ್ರ ವಿತರಣೆ ಮಾಡುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.


8.11 ಲಕ್ಷ ವಿತರಣೆ ಗುರಿ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 8.11 ಮಂದಿಗೆ ಜಾತಿ ಪ್ರಮಾಣ ಪತ್ರ ವಿತರಣೆಗೆ ಸಿದ್ಧತೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಗುರುವಾರ ಮೊದಲ ದಿನ ಸುಮಾರು 1500 ರಷ್ಟು ಮಂದಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಆಯಾ ಗ್ರಾಮಲೆಕ್ಕಿಗರಿಗೆ ಜವಾಬ್ದಾರಿ:

ಜಾತಿ ಪ್ರಮಾಣ ಪತ್ರ ವಿತರಣೆ ಮಾಡಲು ಆಯಾ ಗ್ರಾಪಂನ ಗ್ರಾಮ ಲೆಕ್ಕಿಗರಿಗೆ ಜವಾಬ್ದಾರಿ ನೀಡಲಾಗಿದೆ. ಗ್ರಾಮ ಲೆಕ್ಕಿಗರು ಗ್ರಾಮ ಸಹಾಯಕ ಸೇರಿದಂತೆ ಮೊದಲಾದವರ ಸಹಾಯ ಪಡೆದುಕೊಂಡು ಫಲಾನುಭವಿಯ ಮನೆ ಬಾಗಿಲಿಗೆ ತೆರಳಿ ವಿತರಣೆ ಮಾಡಬೇಕಿದೆ.

ವಿತರಣೆಗೆ ಪ್ರತ್ಯೇಕ ಆ್ಯಪ್‌:

ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವುದಷ್ಟೇ ಅಲ್ಲ. ವಿತರಣೆ ಮಾಡುವ ಫೋಟೋ ದೊಂದಿಗೆ ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನು ವಿತರಣೆ ಆ್ಯಪ್‌ನಲ್ಲಿ ದಾಖಲು ಮಾಡಬೇಕು. ಸುಮಾರು 10- 14 ದಿನಗಳಲ್ಲಿ ಎಲ್ಲ ಜಾತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಮಾಹಿತಿ ನೀಡಿದ್ದಾರೆ.

---ಬಾಕ್ಸ್‌---

ಚಿಕ್ಕಮಗಳೂರು ತಾಲೂಕಿನಲ್ಲಿ ಹೆಚ್ಚು ವಿತರಣೆ

ಜಾತಿ ಪ್ರಮಾಣ ವಿತರಣೆ ಕಾರ್ಯ ಗುರುವಾರ ಆರಂಭಗೊಂಡಿದ್ದರೂ ಚಿಕ್ಕಮಗಳೂರು ತಾಲೂಕಿನಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಜಾತಿ ಪ್ರಮಾಣ ವಿತರಣೆ ಆಗಿದೆ, ಉಳಿದ ತಾಲೂಕುಗಳಲ್ಲಿ ಅಷ್ಟೊಂದು ಸಂಖ್ಯೆ ಜಾತಿ ಪ್ರಮಾಣ ಪತ್ರ ವಿತರಣೆ ಆಗಿಲ್ಲ. ಶುಕ್ರವಾರದಿಂದ ಹೆಚ್ಚಿನ ಸಂಖ್ಯೆ ಯಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮೈಕ್ರೋ ಪ್ಲಾನ್‌ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

-- ಕೋಟ್‌ -- ಡಿಸಿ ಫೋಟೋ....

ಅರ್ಜಿ ಸಲ್ಲಿಸಿದರೆ ಮಾತ್ರ ಪಿಆರ್‌ಸಿ: ಡಿಸಿ ಸ್ಪಷ್ಟನೆ

ವಿತರಣೆ ಮಾಡಬೇಕಾದ ಜಾತಿ ಪ್ರಮಾಣ ಪತ್ರ ಮುದ್ರಣ ಆಗಿವೆ. ಅದನ್ನು ಮುಂದಿನ 10 ದಿನದಲ್ಲಿ ವಿತರಿಸಲಾಗುವುದು. ಶಾಶ್ವತ ನಿವಾಸಿ ಪ್ರಮಾಣ ಪತ್ರ ಬೇಕಾದವರು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಿದ್ದರೆ ಮಾತ್ರ ಶಾಶ್ವತ ಪ್ರಮಾಣ ಪತ್ರ ವಿತರಿಸಲಾಗುವುದು. ಈ ಬಗ್ಗೆ ಹೆಚ್ಚು ಜನರಿಗೆ ಜಾಗೃತಿ ಇಲ್ಲ. ಚಿಕ್ಕಮಗಳೂರು ತಾಲೂಕಿನಲ್ಲಿ ಈವರೆಗೆ ಕೇವಲ 26 ಅರ್ಜಿ ಸಲ್ಲಿಕೆ ಆಗಿವೆ. ಜನರಿಗೆ ಅರಿವು ಮತ್ತು ಪ್ರಚಾರ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ.

- ಭನ್ವರ್‌ ಸಿಂಗ್‌ ಮೀನಾ, ಜಿಲ್ಲಾಧಿಕಾರಿ, ಚಿಕ್ಕಮಗಳೂರು

-- ಬಾಕ್ಸ್‌ --

ಜಾತಿ ಪ್ರಮಾಣ ಪತ್ರ ವಿತರಣೆ ಗುರಿ

ತಾಲೂಕುಸಂಖ್ಯೆ

ಚಿಕ್ಕಮಗಳೂರು2,04,559

ಮೂಡಿಗೆರೆ77,683

ಕೊಪ್ಪ24,171

ಶೃಂಗೇರಿ25,380

ಕಡೂರು2,35,521

ತರೀಕೆರೆ1,11,343

ಅಜ್ಜಂಪುರ60,319

ಎನ್‌.ಆರ್‌.ಪುರ36,452

ಒಟ್ಟು8,11,203ಫೋಟೋ

ಚಿಕ್ಕಮಗಳೂರು ತಾಲೂಕಿನ ಕೊಟ್ಟಿಗೇನಹಳ್ಳಿಯಲ್ಲಿ ಗುರುವಾರ ಫಲಾನುಭವಿಗೆ ಉಚಿತವಾಗಿ ಜಾತಿ ಪ್ರಮಾಣ ಪತ್ರವನ್ನು ಕಂದಾಯ ಅಧಿಕಾರಿಗಳು ವಿತರಿಸಿದರು.