ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ನೀಡಿದ್ದಾರೆ: ಬಿ.ವೈ. ವಿಜಯೇಂದ್ರ

| Published : Apr 24 2024, 02:23 AM IST

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ನೀಡಿದ್ದಾರೆ: ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಪರಿಸ್ಥಿತಿ ನೋಡಿದರೆ ಸಂಕಟ ದುಃಖ ಬರುತ್ತದೆ, ಇಲ್ಲಿನ ರೈತರಿಗೆ ಬೇಸಾಯ ಮಾಡಲು ನೀರು ಕೊಡದೆ ಕಾವೇರಿ ಅಣೆಕಟ್ಟು ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ಕೊಟ್ಟಿದ್ದಾರೆ, ನಮ್ಮ ರೈತರ ಜಮೀನುಗಳಿಗೆ ನೀರುಣಿಸಿದ್ದರೆ ರೈತರು ಇಷ್ಟೊಂದು ಕಷ್ಟ ಪಡಬೇಕಿತ್ತ, ಮಾತಿನಲ್ಲಿ‌ಮಾತ್ರ ರೈತರ ಪರ ಎಂದು ಬೊಗಳೆ ಬಿಡುತ್ತ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಗೂರು

ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹಾಗೂ ಮತದಾರರ ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ, ಚಾಮರಾಜನಗರ ಲೋಕಸಭಾ ಬಿಜೆಪಿ ಅಭ್ಯರ್ಥಿ ಎಸ್‌. ಬಾಲರಾಜ್‌ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ರೈತರ ಪರಿಸ್ಥಿತಿ ನೋಡಿದರೆ ಸಂಕಟ ದುಃಖ ಬರುತ್ತದೆ, ಇಲ್ಲಿನ ರೈತರಿಗೆ ಬೇಸಾಯ ಮಾಡಲು ನೀರು ಕೊಡದೆ ಕಾವೇರಿ ಅಣೆಕಟ್ಟು ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ಕೊಟ್ಟಿದ್ದಾರೆ, ನಮ್ಮ ರೈತರ ಜಮೀನುಗಳಿಗೆ ನೀರುಣಿಸಿದ್ದರೆ ರೈತರು ಇಷ್ಟೊಂದು ಕಷ್ಟ ಪಡಬೇಕಿತ್ತ, ಮಾತಿನಲ್ಲಿ‌ಮಾತ್ರ ರೈತರ ಪರ ಎಂದು ಬೊಗಳೆ ಬಿಡುತ್ತ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಹರಿಹಾಯ್ದರು.

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರವಾಸ ಮಾಡುವಾಗ ರಾಜ್ಯದಲ್ಲಿ ಕಂಡ ಕೆಟ್ಟ ಪರಿಸ್ಥಿತಿ ನೋಡಿದ ಮೇಲೆ ಈ ಸರ್ಕಾರ ಜೀವಂತವಾಗಿಲ್ಲ, ಜವಾಬ್ದಾರಿ ಮುಖ್ಯಮಂತ್ರಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಟೀಕೆಗಳ ಪ್ರಹಾರ ಮಾಡಿದರು.

ಹಿಂದುಳಿದ ವರ್ಗಗಳನ್ನು ಸಿದ್ದರಾಮಯ್ಯ ಸರ್ಕಾರ ಮರೆತಿದೆ, ರೈತರು ಶೋಷಿತರ ಅಭಿವೃದ್ಧಿ ಬಗ್ಗೆ ಇವರಿಗೆ ಕಾಳಜಿ ಇಲ್ಲ, ಪ. ಜಾತಿ ಮತ್ತು ಪಂಗಡದ ಜನರ ಕಲ್ಯಾಣಕ್ಕೆ ಮೀಸಲಿಟ್ಟ ಸುಮಾರು 24 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಎಲ್ಲರಿಗೂ ಮುಕ್ಮಲ್ ಟೋಪಿ ಹಾಕಿದ್ದಾರೆ ಎಂದು ಟೀಕಿಸಿದರು.

ಸರಳ ಸಜ್ಜನ ವ್ಯಕ್ತಿ ಎಸ್. ಬಾಲರಾಜು ಅವರಿಗೆ ಮತ ಹಾಕಿ ಗೆಲ್ಲಿಸಿ, ನರೇಂದ್ರ ಮೋದಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್. ಬಾಲರಾಜು, ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ಹನೂರು ಶಾಸಕ ಮಂಜುನಾಥ್, ಡಾ. ರೇವಣ್ಣ ಮಾತನಾಡಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ. ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್. ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಲೋಕೇಶ್ ನಾಯಕ, ಸದಾನಂದ, ಜಗದೀಶ, ಮೂರ್ತಿ, ರಘು ಕೌಟಿಲ್ಯ, ಎಂ. ಚಂದ್ರಶೇಖರ್, ಶಿವಣ್ಣ, ಶಿವಮೂರ್ತಿ, ಎಂ.ಕೆ. ಸಿದ್ದರಾಜು, ಎಂ.ಆರ್. ಸುಂದರ್, ಪುಟ್ಟಮಾದಯ್ಯ ಇದ್ದರು.