ಸಾರಾಂಶ
ಗುಂಡ್ಲುಪೇಟೆ: ತಾಲೂಕಿನ ಇಂಗಲವಾಡಿ ಗ್ರಾಮದ ಸಿಸಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಪಂ ಸದಸ್ಯ ಅಭಿಷೇಕ್ ಒತ್ತಾಯಿಸಿದ್ದಾರೆ. ಕಳೆದ 2023 ಮಾರ್ಚ್ ತಿಂಗಳ ಅಂತ್ಯದಲ್ಲಿ ಗುದ್ದಲಿ ಪೂಜೆ ನಡೆದಿದೆ ಆದರೆ 15 ಮೀಟರ್ ನಷ್ಟು ದೂರ ಕಾಂಕ್ರೀಟ್ ಹಾಕಿಲ್ಲ. ಅಲ್ಲದೆ 20 ಮೀಟರ್ ನಷ್ಟು ಸ್ಯಾಬ್ ಕೂಡ ಹಾಕಿಲ್ಲ. ಗುತ್ತಿಗೆದಾರರ ಗಮನಕ್ಕೆ ತಂದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೂಡ ಕಾಮಗಾರಿ ಪೂರ್ಣ ಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.ಗುತ್ತಿಗೆದಾರ ಹಾಗೂ ಎಂಜಿನಿಯರ್‌ಗೆ ಗ್ರಾಮಸ್ಥರು ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದ್ದಾರೆ. ಮುಂದಿನ ವಾರ ಗ್ರಾಮದಲ್ಲಿ ಮಾ.3 ರಿಂದ 5 ರ ವರೆಗೆ ಅಲ್ಲಹಳ್ಳಿ ಮಾರಮ್ಮನ ಜಾತ್ರೆ ನಡೆಯಲಿದ್ದು ಕಾಮಗಾರಿ ಪೂರ್ಣಗೊಳ್ಳದೆ ಇದ್ದರೆ ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದಿದ್ದಾರೆ. ಕಳೆದ ವರ್ಷ ಆರಂಭವಾದ ಸಿಸಿ ರಸ್ತೆ,ಚರಂಡಿ ಕಾಮಗಾರಿ ಮುಗಿದಿಲ್ಲ.ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಹಾಗು ಎಂಜಿನಿಯರ್‌ಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇಂಗಲವಾಡಿ ಗ್ರಾಮದ ಸಿಸಿ ರಸ್ತೆ,ಚರಂಡಿ ಕಾಮಗಾರಿ ಸ್ವಲ್ಪ ದೂರ ಮಾಡಿಲ್ಲ.ಕೂಡಲೇ ಕಾಮಗಾರಿ ಪೂರ್ಣಗೊಳಿ ಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. ಮಹೇಶ್, ಜೆಇ, ಕಾವೇರಿ ನೀರಾವರಿ ನಿಗಮ