ಸಾರಾಂಶ
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪರಿಸರ ದೀಪಾವಳಿ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞೆ ಬೋಧಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪರಿಸರಕ್ಕೆ ಮಾನವರ ಸುರಕ್ಷತೆ ದಿಸೆಯಲ್ಲಿ ಪರಿಸರ ದೀಪಾವಳಿಯಾಗಬೇಕು. ಪರಿಸರಕ್ಕೆ ಮಾರಕವಾಗುತ್ತಿರುವ ದೀಪಾವಳಿಯನ್ನು ತೊರೆದು ಮಕ್ಕಳು ಈಗಿನಿಂದಲೇ ಮಕ್ಕಳು ಪರಿಸರ ಸಂರಕ್ಷಿಸುವ ದೀಪಾವಳಿಯನ್ನು ಆಚರಿಸುವಂತೆ ಕ್ಲಸ್ಟರ್ ಅಧಿಕಾರಿ ಸೀಮಾ ಹೇಳಿದರು.ಇತ್ತೀಚೆಗೆ ಇಲ್ಲಿನ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸ್ಕೌಟ್ಸ್, ಗೈಡ್‌ಬುಲ್ ಬುಲ್, ಕಬ್ ಸೇವಾದಳಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪರಿಸರ ದೀಪಾವಳಿ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ದೀಪಾವಳಿ ಹಬ್ಬದಲ್ಲಿ ಸಿಡಿಮದ್ದುಗಳನ್ನು ಸಿಡಿಸದೆ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸುವುದರಿಂದ ಪರಿಸರದಲ್ಲಿರುವ ಅಜೀವ ಸಂಕುಲಗಳ ರಕ್ಷಣೆಗೊಳ್ಳಲಿದೆ. ಪರಿಸರ ಕಲುಷಿತಗೊಳ್ಳುವುದನ್ನು ನಾವು ತಡೆಯಬಹುದಾಗಿದೆ. ಅದರಿಂದ ಮಕ್ಕಳು ಪಟಾಕಿ ಸಿಡಿಮದ್ದುಗಳನ್ನು ತ್ಯಜಿಸುವ ಮೂಲಕ ಪರಿಸರ ಸಂರಕ್ಷಿತ ದೀಪಾವಳಿಯನ್ನು ಆಚರಿಸುವಂತೆ ಸುಂಟಿಕೊಪ್ಪ ಕ್ಲಸ್ಟರ್ ಅಧಿಕಾರಿ ಸೀಮಾ ಕಿವಿಮಾತು ಹೇಳಿದರು.ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಜೋವಿಟಾ ವಾಸ್ ಅಧ್ಯಕ್ಷತೆ ವಹಿಸಿದ್ದರು.
ಸ್ಕೌಟ್ಸ್, ಗೈಡ್, ಬುಲ್ ಬುಲ್, ಕಬ್ ಸೇವಾದಳಗಳ ಶಿಕ್ಷಕರಾದ ಪ್ರೀತಿ ಜೋಯ್ಸ್ ಪಿಂಠೋ, ಈವಾ ಜೀತಾ ಬೆನ್ನಿಸ್, ಮಹೇಶ್ ಅವರು ವಿದ್ಯಾರ್ಥಿಗಳೊಂದಿಗೆ ಸೇರಿ ಬಣ್ಣ ಬಣ್ಣದ ರಂಗೋಲಿ ಪುಡಿಯಿಂದ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಹಣತೆಗಳನ್ನು ವಿಶಿಷ್ಟ ಮಾದರಿಯ ಆಚರಿಸುವ ಬಗ್ಗೆ ಮಾಹಿತಿ ನೀಡಿದರು.ದೀಪಾವಳಿ ಆಚರಣೆ ಪರಿಸರದ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.