ಗಣೇಶ ಚತುರ್ಥಿ, ಈದ್ ಮಿಲಾದ್ ಶಾಂತಿಯುತವಾಗಿ ಆಚರಿಸಿ: ಮೈಬೂಬ್

| Published : Aug 23 2024, 01:03 AM IST

ಗಣೇಶ ಚತುರ್ಥಿ, ಈದ್ ಮಿಲಾದ್ ಶಾಂತಿಯುತವಾಗಿ ಆಚರಿಸಿ: ಮೈಬೂಬ್
Share this Article
  • FB
  • TW
  • Linkdin
  • Email

ಸಾರಾಂಶ

Celebrate Ganesha Chaturthi, Eid Milad peacefully: Myboob

ಕನ್ನಡಪ್ರಭ ವಾರ್ತೆ ವಡಗೇರಾ

ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕೆಂದು ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಮೈಬೂಬ್ ಅಲಿ ಹೇಳಿದರು.

ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪಿಓಪಿ ಗಣೇಶ ಮೂರ್ತಿಯನ್ನು ನಿಷೇಧಿಸಿದ್ದು, ಅದನ್ನು ಸ್ಥಾಪಿಸಬಾರದು. ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.

ಹಬ್ಬದ ವೇಳೆ ಹೆಚ್ಚಿನ ಶಬ್ದದ ಡಿಜೆಗಳನ್ನು ಬಳಸಬಾರದು. ವಿದ್ಯುತ್ ಬಳಕೆಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ತಾಲೂಕಿನ ಜನತೆ ಸೌಹಾರ್ದತೆಯಿಂದ ಆಚರಿಸಬೇಕು. ಒಂದು ವೇಳೆ ಯಾರಾದರೂ ಕೋಮುಗಲಭೆಗಳ ಸೃಷ್ಟಿಗೆ ಪ್ರಚೋದನೆ ನೀಡಿದ್ದೇಯಾದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಸಿದ್ದಣ್ಣಗೌಡ ಕಾಡಂನೊರ್, ಜಲಾಲ ಸಾಬ್ ಚಿಗನೂರ್, ಬಸವರಾಜ್ ಸೊನ್ನದ, ಮಲ್ಲುಗೌಡ ಪೊಲೀಸ್ ಪಾಟೀಲ್, ರಿಷಿಕೇಶ್ ಕುಲಕರ್ಣಿ, ಮಲ್ಲಣ್ಣ ನೀಲಳ್ಳಿ, ಬಸವರಾಜ್ ಗೋನಾಲ್, ಅಬ್ದುಲ್ ಚಿಗನೂರ್, ಮರೆಪ್ಪ, ಅಪ್ಪಾಜಿ ಕಲ್ಲಪ್ಪನೂರ್, ದೇವು ಜಡಿ, ಗುರು ನಾಟೇಕರ್, ಸಯ್ಯದ್ ಅಲಿ ಮುಲ್ಲಾ, ನಿಂಗಪ್ಪ, ಮಂಜುನಾಥ್ ಕೊನಳ್ಳಿ, ಮಲ್ಲು ಜಡಿ ಇದ್ದರು.

-------

22ವೈಡಿಆರ್11: ವಡಗೇರಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಪಿಎಸ್ಐ ಮೈಬೂಬ್ ಅಲಿ ಮಾತನಾಡಿದರು.