ಶ್ರದ್ಧಾ ಭಕ್ತಿಯಿಂದ ಗಣೇಶ, ಈಡ್ ಮಿಲಾದ್ ಆಚರಿಸಿ

| Published : Aug 20 2025, 01:30 AM IST

ಶ್ರದ್ಧಾ ಭಕ್ತಿಯಿಂದ ಗಣೇಶ, ಈಡ್ ಮಿಲಾದ್ ಆಚರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಮಾತನಾಡಿ, ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಗ್ಗೂಡಿ ಯಾರ ಭಾವನೆಗೆ ಧಕ್ಕೆ ಉಂಟಾಗದಂತೆ ಶಾಂತಿ, ಸೌಹರ್ದತೆಯಿಂದ ಆಚರಣೆ ಮಾಡಬೇಕು ಅಹಿತಕರ ಘಟನೆ ನಡೆಯದಂತೆ ಇಲಾಖೆ ಜೊತೆ ಸಹಕರಿಸಬೇಕು ಎಂದರು. ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಅನುಮತಿ ಕಡ್ಡಾಯವಾಗಿ ಸ್ಥಾಪಕರು ಅನುಸರಿಸಬೇಕು, ಕೇವಲ ಐದು ದಿನಗಳ ಮಾತ್ರ ಪ್ರತಿಷ್ಠಾಪನೆ ಮಾಡಲು ಮಾತ್ರ ಕಾಲಾವಕಾಶ ನೀಡಲಾಗಿದೆ.

ಗಣಪತಿ ಪ್ರತಿಷ್ಟಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆಯಬೇಕು. ಪ್ರತಿಷ್ಠಾಪನೆ ದಿನದಿಂದ ಹಿಡಿದು ವಿಸರ್ಜನೆಯಾಗುವರೆಗೂ ಯಾವುದೆ ಭಾವನೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು, ಪ್ರತಿ ಗ್ರಾಮಗಳಲ್ಲೂ ಪ್ರತ್ಯೇಕ ಗಣಪತಿ ಸ್ಥಾಪನೆ ಬದಲು ಒಟ್ಟಾಗಿ ಆಚರಿಸುವುದು ಒಳ್ಳೇಯದು, ಗಣಪತಿ ಕೂರಿಸುವವರು ಒಟ್ಟಾರೆ ಗ್ರಾಮಸ್ಥರ ಸಹಕಾರದೊಂದಿಗೆ ಇಲಾಖೆ ಅನುಮತಿ ಪಡೆದು ನಿಯಮ ಪಾಲಿಸುವಂತಾಗಬೇಕು ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ವೇಳೆ ಯಾವುದೆ ಧರ್ಮದವರಿಗೂ ಧಕ್ಕೆ ಆಗದ ರೀತಿ ಯುವಕರು ನಡೆದುಕೊಳ್ಳಬೇಕು, ಬೆಳಗ್ಗೆ 6ಗಂಟೆಯಿಂದ 10ಗಂಟೆತನಕ ಧನಿವರ್ಧಕ ಬಳಕೆಗೆ ಅವಕಾಶವಿದೆ ಎಂದರು.ಅದೇ ರೀತಿಯಲ್ಲಿ ಮುಂದಿನ ತಿಂಗಳ 5ರಂದು ಈದ್ ಮಿಲಾದ್ ಹಬ್ಬವು ಇರುವ ಹಿನ್ನೆಲೆ ಮುಸ್ಲಿಂ ಮುಖಂಡರ ಶ್ರದ್ಧಾ ಭಕ್ತಿಯಿಂದ ಅಚರಣೆ ಮಾಡುವ ಮೂಲಕ ಯಾರ ಭಾವನೆಗಳಿಗೂ ಧಕ್ಕೆ ಉಂಟಾಗದಂತೆ ಆಚರಣೆ ಮಾಡಬೇಕು, ಅಹಿತಕರ ಘಟನೆ ನಡೆಯದಂತೆ ಇಲಾಖೆ ಜೊತೆ ಸಹಕರಿಸಬೇಕು ಎಂದರು.ಸಭೆಯಲ್ಲಿ ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಉಪನಿರೀಕ್ಷಕ ಸುಪ್ರೀತ್, ಅಪರಾಧ ವಿಭಾಗ ಉಪನಿರೀಕ್ಷಕ ಚೆಲುವರಾಜ್, ತಿಮ್ಮರಾಜೀಪುರ ಕೆಂಪರಾಜು, ರಾಜು, ಮಹೇಶ್, ರಘು, ಭಾಸ್ಕರ್, ಅಯಾಜ್,ಇದ್ರೀಸ್, ಮಮಲ್ಲಿಕಾರ್ಜುನ್, ಮಹದೇವಸ್ವಾಮಿ(ಭಟ್ಟ) ಇನ್ನಿತರಿದ್ದರು.