ಸಾರಾಂಶ
ಹಬ್ಬದ ವೇಳೆಯಲ್ಲಿ ಯಾರು ದಾಂಧಲೇ ಮಾಡುವದಾಗಲಿ, ತಮ್ಮ ವೈಯಕ್ತಿಕ ವಿಚಾರ ಹಬ್ಬದ ವೇಳೆ ತರುವದಾಗಲಿ ಮಾಡಬಾರದು
ಹನುಮಸಾಗರ
ಮೊಹರಂ ಹಬ್ಬವನ್ನು ಸಾಮರಸ್ಯ ಭಾವದಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ಧನಂಜಯ ಎಂ. ಹೇಳಿದರು.ಸಮೀಪದ ಹೂಲಗೇರಾ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಹಬ್ಬದ ವೇಳೆಯಲ್ಲಿ ಯಾರು ದಾಂಧಲೇ ಮಾಡುವದಾಗಲಿ, ತಮ್ಮ ವೈಯಕ್ತಿಕ ವಿಚಾರ ಹಬ್ಬದ ವೇಳೆ ತರುವದಾಗಲಿ ಮಾಡಬಾರದು. ಎಲ್ಲರೂ ಒಂದಾಗಿ, ಶಾಂತಿಯುತವಾಗಿ, ಸೌಹಾರ್ದದಿಂದ ಆಚರಿಸಬೇಕು. ಯಾವುದಾದರು ಅಪರಾಧಗಳು ನಡೆದಿದ್ದು ಕಂಡುಬಂದರೆ ಅವರ ವಿರುದ್ಧ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಬಸಲಿಂಗಯ್ಯ ಸೊಪ್ಪಿಮಠ, ಮುತ್ತಣ್ಣ ಕರಡಿ, ಪ್ರಕಾಶ ರಾಠೋಡ, ರವಿಕುಮಾರ ಚವ್ಹಾಣ, ಹನುಮಪ್ಪ ಗೊರೆಬಾಳ, ಚಂದ್ರಶೇಖರ, ಕಾಳಪ್ಪ, ಮುತ್ತುರಾಜ ರಾಠೋಡ, ರವಿ ಪಾಟೀಲ್, ಪ್ರಲ್ಹಾದ ಮಾಲಗಿತ್ತಿ, ಮಲಕಪ್ಪ ಗಾಣಗೇರ, ಹಸನಸಾಬ, ವೈ.ಎಫ್. ತಳವಾರ, ಮುಖ್ಯಪೇದೆ ಮೈಬೂಬಸಾಬ ನಧಾಪ್, ಸಿದ್ಧರಾಮಪ್ಪ ಭೋವಿ ಸೇರಿದಂತೆ ಇತರರು ಇದ್ದರು.