ಸೌಹಾರ್ದತೆಯಿಂದ ಮೊಹರಂ ಆಚರಿಸಿ

| Published : Jul 15 2024, 01:54 AM IST

ಸಾರಾಂಶ

ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ಚನ್ನಯ್ಯ ದೇವೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ಚನ್ನಯ್ಯ ದೇವೂರ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ನಿಮಿತ್ತ ಕರೆದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಮೊಹರಂ ಹಬ್ಬವನ್ನು ಹೆಚ್ವಾಗಿ ಹಿಂದೂಗಳೇ ಆಚರಿಸಿ ಅಲೈದೇವರನ್ನು ಅವರೇ ಹಿಡಿಯುತ್ತಾರೆ. ಆದ್ದರಿಂದ ಹಿಂದೂ-ಮುಸ್ಲಿಂ ಭಾವೈಕ್ಯೆಯಿಂದ ಎಲ್ಲರೂ ಸೇರಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಹಬ್ಬವನ್ನು ಆಚರಿಸಬೇಕು. ಯಾವುದೇ ಅನ್ಯಕೋಮಿನ ಬಗ್ಗೆ ಜಾಲತಾಣದಲ್ಲಿ ಸ್ಟೇಟರ್ ಮತ್ತು ವಿಡಿಯೋ ಪೋಸ್ಟ್ ಮಾಡಿದರೆ ಅವರ ವಿರುದ್ದ ಕೂಡಲೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಮಹಾಂತೇಶ ಅವಾರಿ ಮಾತನಾಡಿ, ಹುನಗುಂದ ತಾಲೂಕು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲ ಜನಾಂಗದವರು ಸೇರಿ ಹಿಂದೂ ಮುಸ್ಲಿಂ ಸಹೋದರಂತೆ ಆಚರಿಸುವ ಹಬ್ಬವಾಗಿದೆ. ಆದ್ದರಿಂದ ಎಲ್ಲ ಹಬ್ಬವನ್ನು ಹಿಂದು ಮುಸ್ಲಿಂ ಶಾಂತಿ ಸೌಹಾರ್ದದಿಂದ ಹಬ್ಬವನ್ನು ಎಲ್ಲರೂ ಕೂಡಿಕೊಂಡು ಆಚರಿಸಬೇಕೆಂದು ತಿಳಿಸದರು.

ಈ ವೇಳೆ ಮುಖಂಡರಾದ ಜಬ್ಬಾರ ಕಲಬುರ್ಗಿ, ಅಪ್ಪು ಆಲೂರ ಮಾತನಾಡಿದರು. ಅಮರೇಶ ನಾಗೂರ, ಮೆಹಬೂಬ ಸರಕಾವಸ, ಮಲ್ಲಿಕಾರ್ಜುನ ಚೂರಿ, ಮಹಾಂತೇಶ ಮದರಿ, ಚಂದ್ರು ತಳವಾರ, ರಜಾಕ ರೇಷ್ಮಿ , ಹನಮಂತ ಕುರಿ, ಹಾಜಿಪೀರ ಪೀರಜಾದೆ, ಸಿದ್ದು ಕವಲಿ ಇದ್ದರು.