ಸಾರಾಂಶ
ಮಸ್ಕಿಯ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆ ನಡೆಯಿತು.
ಶಾಂತಿ ಸಭೆಯಲ್ಲಿ ಸಿಪಿಐ ಬಾಲಚಂದ್ರ ಲಕ್ಕಂ ಮನವಿ
ಕನ್ನಡಪ್ರಭ ವಾರ್ತೆ ಮಸ್ಕಿಯಾವುದೇ ಸಮಾಜದ ಹಬ್ಬಗಳಿರಲಿ ಎಲ್ಲರೂ ಜೊತೆಗೂಡಿ ಸಹೋದರರಂತೆ ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು ಎಂದು ಮಸ್ಕಿ ಸಿಪಿಐ ಬಾಲಚಂದ್ರ.ಡಿ.ಲಕ್ಕಂ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಮಾತನಾಡಿ, ಮಸ್ಕಿ ಜನರು ಶಾಂತಿ ಪ್ರೀಯರಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ ಪೊಲೀಸ್ ಇಲಾಖೆಯಿಂದ ಪ್ರತಿಯೊಂದು ಆಸರೆಖಾನ ಹತ್ತಿರ ಪೊಲೀಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಮೊಹರಂ ಹಬ್ಬವಿರುವುದರಿಂದ ಪುರಸಭೆಯಿಂದ ಸ್ವಚ್ಛತೆ ಮಾಡಿಸಿ, ಕತ್ತಲ್ ರಾತ್ರಿ ಹಾಗೂ ದಪನ್ ದಿನದಂದು ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಿದರು.
ನಂತರ ಜಿಲಾನಿ ಖಾಜಿ ಮಾತನಾಡಿ, ಮಸ್ಕಿಯಲ್ಲಿ ಮೊಹರಂ ಹಬ್ಬ ಸರ್ವಜನಾಂಗದವರು ಸೇರಿಕೊಂಡು ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ. ಮಸ್ಕಿ ಪಟ್ಟಣದಲ್ಲಿ 7 (ಆಸರಖಾನಾ) ಸ್ಥಳಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗುವುದು ಜು.17 ದಪನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಪತ್ರಕರ್ತ ಅಬ್ದುಲ್ ಅಜಿಜ್, ಸಾರಪ್ಪ ಬಂಗಾಲಿ, ತಿಮ್ಮಣ್ಣ ಗುಡಿಸಲಿ, ಮಲ್ಲಯ್ಯ ಬಳ್ಳಾ, ವೀರೇಶ ಪಾಟೀಲ್, ಮೌನೇಶ್ ನಾಯಕ್, ಕ್ರೈಂ ಬ್ರಾಂಚ್ ಪಿಎಸ್ಐ ಭೀಮದಾಸ್, ಕರವೇ ಅಧ್ಯಕ್ಷ ಅಶೋಕ್ ಮುರಾರಿ, ದುರ್ಗರಾಜ್ ವಟಗಲ್, ಆರ್. ಕೆ.ನಾಯಕ್, ಅನಿಸ ಖಾಜಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.