ಪರಿಸರ ಬೆಳೆಸಿ, ಮುಂದಿನ ಪೀಳಿಗೆಗೆ ಉಳಿಸಿ: ಲೀಲಾವತಿ ಕರೆ

| Published : Jul 08 2024, 12:39 AM IST

ಸಾರಾಂಶ

ಯುವಪೀಳಿಗೆಯಲ್ಲಿ ಪರಿಸರ ಉಳಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಪರಿಸರ ಮಾಹಿತಿ ಕುರಿತು ಪ್ರಸ್ತುತ ಇಂದಿನ ಪೀಳಿಗೆಯು ಪರಿಸರಕ್ಕೆ ಹಾನಿಗೊಳಿಸದೆ ಮುಂದಿನ ಪೀಳಿಗೆಗೆ ಪರಿಸರ ಉಳಿಸುವುದರೊಂದಿಗೆ ಬೆಳೆಸಬೇಕಾಗಿದೆ. ಯುವಪೀಳಿಗೆಯಲ್ಲಿ ಪರಿಸರ ಉಳಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು ವಲಯದ 7ನೇ ಹೊಸಕೋಟೆ ಕಾರ್ಯಕ್ಷೇತ್ರದ ಯೋಜನೆಯ ವತಿಯಿಂದ 7ನೇ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಪರಿಸರ ಮಾಹಿತಿ ಹಾಗೂ ಜಾಗೃತಿ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾದ ಸಮಾರಂಭವನ್ನು

7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಓ.ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳು ಹಾಗೂ ಅತಿಥಿಗಳು ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನಡುವ ಮೂಲಕ ಹಬ್ಬ ಆಚರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 7ನೇ ಹೊಸಕೋಟೆ ಒಕ್ಕೂಟದ ಅಧ್ಯಕ್ಷ ಕೌಶಲ್ಯ, ಅರಣ್ಯ ಇಲಾಖೆಯ ಅಧಿಕಾರಿ ದೇವಯ್ಯ, ಕೂಡಿಗೆ ಡಯಟ್ ಉಪನ್ಯಾಸಕ ಜಗದೀಶ್, ಪ್ರೌಢಶಾಲೆಯ ಶಿಕ್ಷಕಿ ರಜಿಯಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಚಿನ್ನಪ್ಪ, ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷರಾದ ಅಬ್ದುಲ್ ರಜಾಕ್, ಮಾಜಿ ಗ್ರಾ.ಪಂ. ಮಾಜಿ ಅಧ್ಯಕ್ಷರು, ಗುಡ್ಡೆಹೊಸೂರು ವಲಯದ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ದಾಸಂಡ ರಮೇಶ್, ವಲಯದ ಮೇಲ್ವಿಚಾರಕ ಯತೀಶ್, ಕೃಷಿ ಮೇಲ್ವಿಚಾರಕ ರಾಜಣ್ಣ, ಸೇವಾ ಪ್ರತಿನಿಧಿ ನಿರ್ಮಲ ಪ್ರಕಾಶ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು, 7ನೇ ಹೊಸಕೋಟೆ ಒಕ್ಕೂಟದ ಸ್ವ ಸ್ವಹಾಯ ಸಂಘದ ಸದಸ್ಯರು, ಶಾಲೆ ಸಹ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

7ನೇ ಹೊಸಕೋಟೆ ಗ್ರಾಮದ ಕೆರೆ ದಡದಲ್ಲಿ ಅಂದಾಜು 80 ಗಿಡ, ಬಸ್ ನಿಲ್ದಾಣ ಇದ್ದು, ಮತ್ತೊಂದು ಭಾಗದಲ್ಲಿ ಬಸ್ ನಿಲ್ದಾಣ ಇಲ್ಲದೆ ಇರುವ ಸ್ಥಳದಲ್ಲಿ ವಯೋವೃದ್ದರು, ಮಹಿಳೆಯರು ಶಾಲಾ ಕಾಲೇಜು ಮಕ್ಕಳು ಬಂದು ಬಿಸಿಲಲ್ಲಿ ನಿಲ್ಲ ಬೇಕಾದ ಅನಿವಾರ್ಯತೆಯನ್ನು ಮನಗಂಡ ಗ್ರಾಮ ಪಂಚಾಯಿತಿಯವರ ಅನುಮತಿಯ ಮೇರೆಗೆ ಹೆದ್ದಾರಿ ಬದಿಯಲ್ಲಿ ನೆರಳಿಗಾಗಿ 10 ಗಿಡಗಳನ್ನು ನೆಡಲಾಯಿತು. ಸುಮಾರು 30 ಗಿಡಗಳನ್ನು ಒಕ್ಕೂಟದವರು, ಸ್ವಯಂ ಸೇವಕರು ಸೇರಿ. ಶಾಲೆಯ ಹೊರ ಭಾಗದ ಕೌಂಪೌಂಡ್ ಬಳಿ ನಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಘಟಕದ ಸ್ವಯಂ ಸೇವಕರಾದ ರಾಜ, ಪ್ರಕಾಶ್, ವಸಂತ್ ಕುಮಾರ್, ಪ್ರಶಾಂತ್, ಪುರುಷೋತ್ತಮ್, ಕವಿತ, ಮಂಜುಳಾ, ಉಷಾ, ಹೇಮಾವತಿ, ನಿರ್ಮಲಾ ಪ್ರಕಾಶ್ ಇದ್ದರು.