ಹಬ್ಬ ಆಚರಿಸಿ, ಮತ್ತೊಬ್ಬರಿಗೆ ತೊಂದರೆ ಕೊಡಬೇಡಿ

| Published : Mar 26 2024, 01:52 AM IST

ಸಾರಾಂಶ

ಶ್ರಮಿಕ ವರ್ಗದವರು ರೈತರು, ಜನಸಾಮಾನ್ಯರು ಜಾಸ್ತಿ ಇದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಕಾನೂನು ಇತಿಮಿತಿಯಲ್ಲಿ ಹಬ್ಬ ಆಚರಣೆ ಮಾಡಬೇಕು

ಹರಪನಹಳ್ಳಿ: ಹಬ್ಬಗಳು ನಮ್ಮ ವೈಯಕ್ತಿಕ ಸಂತೋಷಕ್ಕಾಗಿ ಇವೆಯೇ ಹೊರತು ಇನ್ನೊಬ್ಬರಿಗೆ ಕಿರುಕುಳ ಕೊಡುವುದಕ್ಕೆ ಅಲ್ಲ ಎಂದು ಇಲ್ಲಿಯ ಪಿಎಸ್ಐ ಶಂಭುಲಿಂಗ ಸಿ. ಹೀರೆಮಠ ಹೇಳಿದರು.

ಪಟ್ಟಣದ ವಾಲ್ಮೀಕಿನಗರದ ದೊಡ್ಡಗರಡಿಕೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಹೋಳಿ ಹಬ್ಬದ ಪ್ರ ಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.ಇಲ್ಲಿ ಶ್ರಮಿಕ ವರ್ಗದವರು ರೈತರು, ಜನಸಾಮಾನ್ಯರು ಜಾಸ್ತಿ ಇದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಕಾನೂನು ಇತಿಮಿತಿಯಲ್ಲಿ ಹಬ್ಬ ಆಚರಣೆ ಮಾಡಬೇಕು ಎಂದರು.ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಕೊಡದೇ ಸರಳವಾಗಿ ಹಬ್ಬ ಆಚರಣೆ ಮಾಡಬೇಕು. ಎಲ್ಲರಿಗೂ ಕಾನೂನು ಒಂದೇ ನಾವು ಕಾನೂನು ಕಾಪಾಡಿದರೆ ಕಾನೂನು ನಮ್ಮನ್ನು ಕಾಪಾಡುತ್ತದೆ. ಸಿಟ್ಟಿನಲ್ಲಿ ನೀವು ಯಾರಿಗಾದರೂ ತೊಂದರೆ ಮಾಡಬೇಡಿ ಎಂದು ಸಲಹೆ ನೀಡಿದರು.ವಾಲ್ಮೀಕಿ ನಾಯಕ ಸಮಾಜದ ಮಾಜಿ ಅದ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಯಾರಿಗೂ ತೊಂದರೆ ಕೊಡದೇ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಮಂಡಕ್ಕಿ ಸುರೇಶ, ಪೊಲೀಸ್ ಇಲಾಖೆಯ ಕುಮಾರ್, ಇಮಾಮಸಾಹೇಬ್ ದೊಡ್ಡಗರಡಿ, ದೈವಸ್ಥರಾದ ಹಾಲಸಿದ್ದಪ್ಪ, ದುರುಗಪ್ಪ, ದ್ಯಾಮಜ್ಜಿ ಹನುಮಂತಪ್ಪ, ಡಿ.ದಂಡ್ಯೆಪ್ಪ, ಕೆ.ಅಂಜಿನಪ್ಪ, ಗಿಡ್ಡಳ್ಳಿ ಮೈಲಪ್ಪ, ಬಾಲದಂಡೆಪ್ಪ, ಕಾವಲರ ನಾಗಪ್ಪ, ಹಳೇಬ್ಯಾಡರ ಕೆಂಚಪ್ಪ, ಮ್ಯಾಕಿ ಶ್ರೀನಿವಾಸ, ಕಮ್ಮಾರ ಪುತ್ರೇಶ, ಕಳ್ಳಿ ನಾಗಪ್ಪ ಇದ್ದರು.