ಸಾರಾಂಶ
ಸಿಂಧನೂರು: ಯಾವುದೇ ಹಬ್ಬವಾಗಲಿ ಶಾಂತಿ ಸೌಹಾರ್ದತೆಯಿಂದ ಒಗ್ಗೂಡಿ ಆಚರಿಸುವ ಮೂಲಕ ಸಾಮರಸ್ಯ ಕಾಪಾಡಬೇಕು ಎಂದು ಡಿವೈಎಸ್ಪಿ ಬಿ.ಎಸ್.ತಳವಾರ ಹೇಳಿದರು.
ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಜು.12ರಂದು ಅಲಾಯಿ ದೇವರುಗಳ ಪಂಜಾಗಳು ಕೂರುವ ಮೂಲಕ ಮೊಹರಂ ಹಬ್ಬ ಆರಂಭವಾಗಲಿದ್ದು, ಜು.17ರಂದು ದಫನ್ ಆಗಲಿವೆ. ಅಲಾಯಿ ದೇವರು ಕೂರಿಸುವವರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಗಲಾಟೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ ಬೆಂಕಿ ಮಾತನಾಡಿ, ಅಲಾಯಿ ದೇವರು ಕೂರಿಸುವ ಮಂಟಪದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಇಲಾಖೆ ಸೂಚಿಸಿದ ಮಾರ್ಗದಲ್ಲಿ ಪಂಜಾಗಳ ಮೆರವಣಿಗೆ ನಡೆಸಬೇಕು ಎಂದು ಹೇಳಿದರು.
ಮುಖಂಡರಾದ ಎಚ್.ಎನ್.ಬಡಿಗೇರ್, ಎಂ.ಡಿ.ನದೀಮ್ ಮುಲ್ಲಾ, ವೀರೇಶ ಯಡಿಯೂರಮಠ, ರವಿ ಹಿರೇಮಠ, ಚನ್ನಬಸವರಾಜ ಕುಂಬಾರ, ಭೀಮೇಶ ಕವಿತಾಳ, ನಾರಾಯಣ ಬೆಳಗುರ್ಕಿ ಮಾತನಾಡಿದರು. ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಎಚ್.ಬಸವರಾಜ, ಮುಖಂಡರಾದ ಸಲ್ಮಾನ್ ಜಾಗೀರದಾರ್, ಚನ್ನಬಸವಸ್ವಾಮಿ ಹರೇಟನೂರು, ಬುಡ್ಡನ್‌ಸಾಬ, ಅಮೀನಸಾಬ ನದಾಫ್, ರಬ್ಬಾನಿ ಜಾಗೀರದಾರ್ ಸೇರಿ ವಿವಿಧ ಸಮಾಜಗಳ ಮುಖಂಡರು ಇದ್ದರು.