ಸಾರಾಂಶ
ಕುಶಾಲನಗರ ಬ್ರೈನ್ ಅಕಾಡೆಮಿ ವತಿಯಿಂದ ಮಕ್ಕಳಿಗೆ ಆರಂಭಿಸಲಾದ ಅಬಾಕಸ್ ಕಲಿಕಾ ತರಬೇತಿಗೆ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಚಾಲನೆ ನೀಡಿದರು.
ಕೂಡುಮಂಗಳೂರು : ಪ್ರೌಢಶಾಲೆಯಲ್ಲಿ ಶಾಲೆಯ ರಾಮಾನುಜನ್ ಗಣಿತ ಸಂಘದ ಆಶ್ರಯದಲ್ಲಿ
ಕುಶಾಲನಗರ ಬ್ರೈನ್ ಅಕಾಡೆಮಿ ವತಿಯಿಂದ ಮಕ್ಕಳಿಗೆ ಆರಂಭಿಸಲಾದ ಅಬಾಕಸ್ ಕಲಿಕಾ ತರಬೇತಿಗೆ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಚಾಲನೆ ನೀಡಿದರು.
ಅಬಾಕಸ್ ತರಬೇತಿ ಪಡೆಯಲಿರುವ ಶಾಲೆಯ 100 ಮಕ್ಕಳಿಗೆ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಸಾಧನಾ ಸಲಕರಣೆ ಮತ್ತು ಅಭ್ಯಾಸ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಪ್ರಾಸ್ತಾವಿಕ ಮಾತನಾಡಿದರು.ಅಬಾಕಸ್ ಕಲಿಕಾ ತರಬೇತಿಯ ಮಹತ್ವ ಕುರಿತು ಕುಶಾಲನಗರ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿಯ ಮುಖ್ಯಸ್ಥ ಕುಸುಮ ಆರ್.ರಾಜ್ ಮಾತನಾಡಿದರು.
ಎಸ್‌ಡಿಎಂಸಿ ಅದ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ಎಂ.ವಿ.ನಾರಾಯಣ, ಕವಿತ ಮೋಹನ್, ಎಂ.ಎಂ.ಶಾಹಿರ್, ವಿ.ಸಿ.ಅಮೃತ್, ಕೆ.ಪಿ.ಶರತ್, ಕೆ.ಎನ್.ಸುರೇಶ್, ಕೃತಿಕ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಡಿ. ಶ್ರೀಜಿತ್, ವ್ಯವಸ್ಥಾಪಕ ಆರ್. ರಾಜು, ಸಿಬ್ಬಂದಿ ಎಂ.ಜಿ. ಬೊಳ್ಳಮ್ಮ, ದಾನಿ ಸೈಜನ್ ಪೀಟರ್ ಸಂಪನ್ಮೂಲ ಶಿಕ್ಷಕಿಯರಾದ ಕಲ್ಪನ, ಕೆ.ಟಿ.ಲಾವಣ್ಯ ಇದ್ದರು.
ಅಬಾಕಸ್ ಲೆಕ್ಕ ಪ್ರದರ್ಶನದಲ್ಲಿ ತರಬೇತಿನಿರತ ವಿದ್ಯಾರ್ಥಿಗಳಾದ ಲಿಖಿತ, ಸೋನು ಮತ್ತು ಆಕಾಂಕ್ಷ ಅಬಾಕಸ್ ಕಲಿಕೆಯ ಕುರಿತು ಬಾಯ್ದೆರೆ ಲೆಕ್ಕ/ ಸಮಸ್ಯೆಗಳನ್ನು ಬಿಡಿಸಿದರು.
ಅಬಾಕಸ್ ತರಬೇತಿಯ ಮಹತ್ವ ಕುರಿತು ಶಾಲಾ ಗಣಿತ ಶಿಕ್ಷಕಿ ಬಿ.ಎನ್.ಸುಜಾತ ಮಾಹಿತಿ ನೀಡಿದರು. ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್ ವಂದಿಸಿದರು.