ಕಲಬುರಗಿ ರಂಗಮಾಧ್ಯಮಕ್ಕೆ 50ರ ಸಂಭ್ರಮ: ರಂಗ ಸುವರ್ಣ ಪ್ರಶಸ್ತಿ ಪ್ರದಾನ

| Published : Jul 18 2024, 01:35 AM IST

ಕಲಬುರಗಿ ರಂಗಮಾಧ್ಯಮಕ್ಕೆ 50ರ ಸಂಭ್ರಮ: ರಂಗ ಸುವರ್ಣ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯ ಹವ್ಯಾಸಿ ನಾಟಕ ಸಂಸ್ಥೆ ರಂಗಮಾಧ್ಯಮಕ್ಕೀಗ ಬರೋಬ್ಬರಿ 50 ತುಂಬಿದೆ. ಈ ತನ್ನ ‘ಸುವರ್ಣ ಮಹೋತ್ಸವದ’ ಆಚರಣೆಯನ್ನು ಅರ್ಥಪೂರ್ಣಗೊಳಿಸಲು ಹಾಗೂ ಸಂಭ್ರಮ ಹೆಚ್ಚಿಸಲು ವಿವಿಧ ಕ್ಷೇತ್ರಗಳಲ್ಲಿನ ಐವರಿಗೆ ರಂಗ ಸುವರ್ಣ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯ ಹವ್ಯಾಸಿ ನಾಟಕ ಸಂಸ್ಥೆ ರಂಗಮಾಧ್ಯಮಕ್ಕೀಗ ಬರೋಬ್ಬರಿ 50 ತುಂಬಿದೆ. ಈ ತನ್ನ ‘ಸುವರ್ಣ ಮಹೋತ್ಸವದ’ ಆಚರಣೆಯನ್ನು ಅರ್ಥಪೂರ್ಣಗೊಳಿಸಲು ಹಾಗೂ ಸಂಭ್ರಮ ಹೆಚ್ಚಿಸಲು ವಿವಿಧ ಕ್ಷೇತ್ರಗಳಲ್ಲಿನ ಐವರಿಗೆ ರಂಗ ಸುವರ್ಣ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಖ್ಯಾತ ಚಿತ್ರ ಕಲಾವಿದ ಪ್ರೊ. ವಿ.ಜಿ. ಅಂದಾನಿ, ಹಿರಿಯ ರಂಗ ಕಲಾವಿದ ಐ.ಎಸ್ ನವಲಿ, ಪ್ರಸಾರ ಭಾರತಿಯ ನಿವೃತ್ತ ಅಧಿಕಾರಿ , ಸದಾನಂದ ಪೆರ್ಲ, ರಂಗ ಕಲಾವಿದೆ, ಹೈದರಾಬಾದ್‌ ಸಂಗೀತಾ (ಮಾನ್ವಿಕರ್) ಗುರುರಾಜ ಕುಲಕರ್ಣಿ, ಪತ್ರಕರ್ತ ಸಂಗಮನಾಥ ರೇವತಗಾವ ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಸುವರ್ಣ ಮಹೋತ್ಸವ ವರ್ಷಾಚರಣೆಯ ಪೂರ್ವಭಾವಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಗೀತ ಗಾಯನ ಮತ್ತು ನಾಟಕ ಪ್ರದರ್ಶನಗಳನ್ನೂ ಹಮ್ಮಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

ರಂಗಮಾಧ್ಯಮದ ಹಿರಿಯ ಕಲಾವಿದರಾದ ಡಾ. ಸ್ವಾಮಿರಾವ ಕುಲಕರ್ಣಿ, ಮೋಹನ ಸೀತನೂರ, ಶಾಂತಾ ಭೀಮಸೇನರಾವ, ವಿಲಾಸ ಸಾತಖೇಡ, ಕೆ ಪಿ ಗಿರಿಧರ, ನಾರಾಯಣ ಕುಲಕರ್ಣಿ ಸೇರಿದಂತೆ ಸದಸ್ಯರು ಸಭೆ ಸೇರಿ, ರಂಗಮಾಧ್ಯಮದ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಹಿರಿಯರಿಗೆ ಪ್ರಶಸ್ತಿ ನೀಡಿ ಗೌರವಿಸುವ ನಿರ್ಣಯ ಕೈಗೊಳ್ಳಲಾಯಿತು.

ಇದೇ ತಿಂಗಳು ಜು.24ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ‘ರಂಗ ಸುವರ್ಣ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗ ಮಾಧ್ಯಮ ಸಂಸ್ಥೆಯ ಸಂಘಟಕ, ನಟರಾದ ನಾರಾಯಣ ಕುಲಕರ್ಣಿ, ರಗಂಕರ್ಮಿ ಕೆ.ಪಿ. ಗಿರಿಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗಮಾಧ್ಯಮಕ್ಕೆ 50ರ ಹರೆಯ:

ಕಲಬುರಗಿಯಲ್ಲಿ ಗಿರಿಡ್ಡಿ ಗೋವಿಂದರಾಜ, ಚಂದ್ರಕಾಂತ ಕುಸುನೂರವರ ನೇತೃತ್ವದಲ್ಲಿ 1974ರಲ್ಲಿ ಆರಂಭವಾದ ಸಂಸ್ಥೆ 50 ಸಾರ್ಥಕ ವಸಂತ ಕಂಡಿದೆ. ಇದನ್ನು ನಾವು ಸಂಸ್ಥೆಯ ಸಾಧನೆಯ ಹರೆಯದ ವಯಸ್ಸು ಎಂದೇ ಹೇಳಬೇಕಾಗಿದೆ.

ಹಲವಾರು ಉತ್ತಮ ನಾಟಕಗಳ ಮೂಲಕ ಕಲಬುರಗಿಯಲ್ಲಿ ‘ಹವ್ಯಾಸಿ ರಂಗಭೂಮಿಗೆ’ ನೆಲೆ ಕೊಡುವುದರ ಜತಜತೆಗೆ ‘ನಾಟಕದ ಪ್ರೇಕ್ಷಕ’ ವರ್ಗವನ್ನೂ ಬೆಳೆಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ.

ಕಲಾವಿದರಾದ ಪ್ರಭಾಕರ ಸಾತಖೇಡ, ಶ್ರೀಧರರಾವ, ಸ್ವಾಮಿರಾವ ಕುಲಕರ್ಣಿ, ಹೇಮಂತ ಕೊಲ್ಲಾಪುರೆ ಅವರು ಸಂಸ್ಥೆಯ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದವರು. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ಗೋವಾದಲ್ಲಿ ‘ಗಡಿನಾಡ ಕನ್ನಡ ನಾಟಕಕೋತ್ಸವದಲ್ಲಿ ನಾಟಕ ಪ್ರದರ್ಶನಗಳನ್ನ ನೀಡಿದ ಹೆಮ್ಮೆ ರಂಗ ಮಾಧ್ಯಮ ಸಂಸ್ಥೆಯದ್ದಾಗಿದೆ.