ಸಾರಾಂಶ
ಸ್ವಚ್ಛ ಭಾರತದ ಕನಸನ್ನು ಗಾಂಧಿರವರು ಕಂಡಿದ್ದರು, ಅದನ್ನು ಸಾಕಾರಗೊಳಿಸುವಲ್ಲಿ ಪ್ರಧಾನಿ ಮೋದಿರವರು ಹೆಚ್ಚಿನ ಮಹತ್ವವಹಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳಲ್ಲಿದೆ ಗಾಂಧಿಜೀ ರವರ ಮಹತ್ವದ ಚಿಂತನೆಗಳನ್ನು ಕಾಣಬಹುದು
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಪಟ್ಟಣದ ಶಾಂತಿನಗರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ರವರ ಉದ್ಯಾನವನವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಸ್ವಚ್ಛ ಭಾರತದ ಕನಸನ್ನು ಗಾಂಧಿರವರು ಕಂಡಿದ್ದರು, ಅದನ್ನು ಸಾಕಾರಗೊಳಿಸುವಲ್ಲಿ ಪ್ರಧಾನಿ ಮೋದಿರವರು ಹೆಚ್ಚಿನ ಮಹತ್ವವಹಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳಲ್ಲಿದೆ ಗಾಂಧಿಜೀ ರವರ ಮಹತ್ವದ ಚಿಂತನೆಗಳನ್ನು ಕಾಣಬಹುದು ಎಂದರು ತಿಳಿಸಿದರು.ರಾಜ್ಯ ಸರ್ಕಾರ ಅತಂತ್ರರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ ಮೂರು ತಿಂಗಳಿಂದ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾ ಹಗರಣದಲ್ಲಿ ಸಿಲುಕಿ ಸರ್ಕಾರ ಅತಂತ್ರ ಸ್ಥಿಯಲ್ಲಿರುವಂತೆ ಗೋಚರಿಸುತ್ತಿದೆ. ಬಿಜೆಪಿ ಸರ್ಕಾರವನ್ನು ಕೆಡವಲು ಮುಂದಾಗದಿದ್ದರೂ ಸಹ ತಾನಾಗೇ ಪತನವಾದರೂ ಆಶ್ಚರ್ಯಪಡಬೇಕಾಗಿಲ್ಲ, ರಾಜ್ಯದ ಜನರೂ ಸಹ ಸ್ವಚ್ಛ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಸ್ವಷ್ಟ ಬಹುಮತದೊಂದಿಗೆ ಮುಂದೆ ಬಿಜೆಪಿ ಪಕ್ಷ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.
ಗಾಂದಿಜೀರವರಿಗೆ ಸತ್ಯವೇ ದೇವರು,ಸತ್ಯಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.ಅಸತ್ಯದ ಮೇಲೆ ಸತ್ಯ ಜಯಗಳಿಸುತ್ತದೆ ಎಂದು ದೃಡವಾಗಿ ನಂಬಿದ್ದರುಗಾಂಧಿಜೀಯವರು ಜೀವನ ತೆರೆದ ಪುಸ್ತಕದಂತೆ ಅವರ ಸಂದೇಶಗಳು ಸರ್ವಕಾಲಿಕ ಸತ್ಯ ಇಂದಿಗೂ ಪ್ರಸ್ತುತ ಕೇಂದ್ರ ಸರ್ಕಾರ ಸತ್ಯವನ್ನು ಎತ್ತಿ ಹಿಡಿಯುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವಲ್ಲಿ ಮತ್ತು ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಮುನ್ನಡೆದಿದೆ ಎಂದರು.ಬೂತ್‌ಗೆ 200 ಸದಸ್ಯರನ್ನಾಗಿಸಿ
ಪಕ್ಷದ ಕಾರ್ಯಕರ್ತರು ಗ್ರಾಮಗಳಲ್ಲಿ ಪ್ರತಿ ಬೂತ್‌ನಲ್ಲಿಯೂ ಕನಿಷ್ಟ ಪಕ್ಷ ೨೦೦ ಮಂದಿಯನ್ನು ಸದಸ್ಯತ್ವರನ್ನಾಗಿ ಮಾಡಬೇಕು ಕಳೆದ ಬಾರಿ ಕ್ಷೇತ್ರದಲ್ಲಿ ೫೦ಸಾವಿರ ಸದಸ್ಯರನ್ನು ನೋಂದಾಯಿಸಲಾಗಿತ್ತು.ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ನೋಂದಾಯಿಸಬೇಕೆಂದು ಕರೆ ನೀಡಿದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರಾದ ಸಂಪಂಗಿರೆಡ್ಡಿ, ಮಾಜಿ ಅಧ್ಯಕ್ಷರಾದ ನಾಗೇಶ್, ಹನುಮಪ್ಪ, ರೈತ ಮೋರ್ಚಾ ಮಾಜಿ ಅಧ್ಯಕ್ಷ ಶಂಕರನಾರಾಯಣರೆಡ್ಡಿ, ನಗರ ಅಧ್ಯಕ್ಷ ಬಿ.ಪಿ.ಮಹೇಶ್, ಬಿ.ಸಿ.ಮೂರ್ತಿ, ಕರವೇ ಚಲಪತಿ, ಬಿಂದು ಮಾದವ, ಹೆಚ್.ಆರ್.ಶ್ರೀನಿವಾಸ್, ಅಮರೇಶ್, ಅಜೆಯ್ ಮತ್ತಿತರರು ಇದ್ದರು.