ಅಹಿಂಸಾ ತತ್ವವನ್ನು ಮಾನವ ಕುಲಕ್ಕೆ ಸಾರಿದ ತ್ಯಾಗಮೂರ್ತಿ ಶ್ರೀಮಹಾವೀರ ಜಯಂತಿಯನ್ನು ಮದ್ದೂರು ಪಟ್ಟಣದಲ್ಲಿ ಮಂಗಳವಾರ ಜೈನ ಸಮುದಾಯದಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಅಹಿಂಸೆಯ ಪರಮಧರ್ಮ ಹಿಂಸೆಯನ್ನು ಮಾಡಬಾರದು ಮಾನವ, ಪ್ರಾಣಿ ಪಕ್ಷಿಗಳನ್ನಾಗಲಿ ಅಥವಾ ಸಣ್ಣ ಕೀಟಗಳಲ್ಲಿ ಹಿಂಸೆ ಪಡಿಸಬಾರದು ಎಂಬ ತತ್ವದ ಅಡಿ ಮಹಾವೀರರನ್ನು ಸ್ಮರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಅಹಿಂಸಾ ತತ್ವವನ್ನು ಮಾನವ ಕುಲಕ್ಕೆ ಸಾರಿದ ತ್ಯಾಗಮೂರ್ತಿ ಶ್ರೀಮಹಾವೀರ ಜಯಂತಿಯನ್ನು ಪಟ್ಟಣದಲ್ಲಿ ಮಂಗಳವಾರ ಜೈನ ಸಮುದಾಯದಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕೋಟೆ ಬೀದಿಯ ಪಾರ್ಶ್ವನಾಥ ಜೈನ ಬಸದಿಯಲ್ಲಿ ಸಮಾವೇಶಗೊಂಡ ಜೈನ ಬಾಂಧವರು ಮಹಾವೀರ ಸ್ವಾಮಿ ಮೂರ್ತಿಗೆ ವಿವಿಧ ಅಭಿಷೇಕ, ಪುಷ್ಪಾಲಂಕಾರ ಸೇವೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಾವೀರ ಬಸವ ಮೂರ್ತಿಯನ್ನು ಮೋಟಾರು ಸಾರೋಟಿನಲ್ಲಿ ಇಟ್ಟು ಜೈನ ಸಮುದಾಯದ ಪುರುಷರು ಮಹಿಳೆಯರು ಮತ್ತು ಮಕ್ಕಳು ಕೋಟೆ ಬೀದಿ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಅಹಿಂಸೆಯ ಪರಮಧರ್ಮ ಹಿಂಸೆಯನ್ನು ಮಾಡಬಾರದು ಮಾನವ, ಪ್ರಾಣಿ ಪಕ್ಷಿಗಳನ್ನಾಗಲಿ ಅಥವಾ ಸಣ್ಣ ಕೀಟಗಳಲ್ಲಿ ಹಿಂಸೆ ಪಡಿಸಬಾರದು ಎಂಬ ತತ್ವದ ಅಡಿ ಮಹಾವೀರರನ್ನು ಸ್ಮರಣೆ ಮಾಡಿದರು.

ಜೈನ ಸಂಘದ ಅಧ್ಯಕ್ಷ ಅರಿಯಂತ್, ಮುಖಂಡರಾದ ನೇಮಿ ಚಂದ ಜಿ, ಗೌತಮ್ ಚಂದ್, ಮದನ್ ಬಾಯಿ, ಮಹಾವೀರ ಚಂದಜಿ, ಭರತ್ ಕುಮಾರ್, ಅಶೋಕ್ ಕುಮಾರ್ ರಾಂಖ, ಚಂದನ್ ರಾಂಖಾ, ಸುಶೀಲಾಬಾಯಿ, ಪ್ರಕಾಶ್ ಬಾಯಿ, ಇಂದಿರಾ ಬಾಯಿ, ಸಂತೋಷ್ ಬಾಯಿ, ಮಂಜು ಬಾಯಿ, ಮಮತಾ ರಂಖಾ, ಪೂಜಾ, ನಿತೇಶ್ ಮತ್ತಿತರರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೈನ ಸಮುದಾಯದಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.ರೇವಣ್ಣಗೆ ಸಿಎಂ ಚಿನ್ನದ ಪದಕ

ಮಳವಳ್ಳಿ: ಸಿವಿಲ್ ಹೆಡ್ ಕಾನ್ಸ್ ಟೇಬಲ್, ಮೂಲತಃ ತಾಲೂಕಿನ ಅಣಸಾಲೆ ಗ್ರಾಮದ ರೇವಣ್ಣರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂಎ ಪದವಿಧರರಾದ ರೇವಣ್ಣ 2002ನೇ ಬ್ಯಾಚಿನ್ ಮಂಡ್ಯ ಜಿಲ್ಲಾ ಪೊಲೀಸ್ ಆಗಿದ್ದು, ಹಾಲಿ ಮಂಡ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಇವರ ಉತ್ತಮ ಸೇವೆ ಪರಿಗಣಿಸಿ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಮಂಡ್ಯ ಜಿಲ್ಲೆಯ ಅಭಿಮಾನಿ ಬಳಗದಿಂದ ಶುಭ ಹಾರೈಸಿದೆ.

ನಾಳೆ ಪೊಲೀಸ್ ಧ್ವಜ ದಿನಾಚರಣೆ

ಮಂಡ್ಯ: ನಗರದ ಡಿಎಆರ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏ.2 ರಂದು ಬೆಳಗ್ಗೆ 8 ಗಂಟೆಗೆ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ನಿವೃತ್ತ ಆರಕ್ಷಕ ಉಪ ನೀರಿಕ್ಷಕರು ದಾಸಪ್ಪ ಆಗಮಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ವಿ.ಜೆ.ಶೋಭಾರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.