ನಗರದಲ್ಲೆಡೆ ಸಡಗರ ಸಂಭ್ರಮದ ಹೋಳಿ ಆಚರಣೆ

| Published : Mar 26 2024, 01:01 AM IST / Updated: Mar 26 2024, 01:19 PM IST

ಸಾರಾಂಶ

ಯುವತಿಯರು, ಯುವಕರು ಹಾಗೂ ಚಿಣ್ಣರು ಸೇರಿದಂತೆ ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳಗ್ಗೆಯಿಂದಲೇ ಬಣ್ಣದಾಟ ಆಡಲಾಯಿತು. 

ವಿಜಯಪುರ: ಯುವತಿಯರು, ಯುವಕರು ಹಾಗೂ ಚಿಣ್ಣರು ಸೇರಿದಂತೆ ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳಗ್ಗೆಯಿಂದಲೇ ಬಣ್ಣದಾಟ ಆಡಲಾಯಿತು. ಹೋಳಿಹುಣ್ಣಿವೆ ಅಂಗವಾಗಿ ಪ್ರತಿಯೊಂದು ಗಲ್ಲಿಗಳಲ್ಲೂ ರವಿವಾರ ರಾತ್ರಿಯಿಡಿ ಕಾಮದಹನ ಮಾಡಿ ಸೋಮವಾರ ಬಣ್ಣದಾಟ ಆಡಲಾಯಿತು. ಯುವತಿಯರು ಹಾಗೂ ಮಕ್ಕಳು ಸಹ ಹಲಗೆ ಬಾರಿಸಿ, ಬಾಯಿ ಬಡಿದುಕೊಂಡು ಬಣ್ಣದಲ್ಲಿ ಮಿಂದೆದ್ದು ಹೋಳಿ ಆಚರಿಸಿ ಸಂಭ್ರಮಿಸಿದರು. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಹಿಂದೂ-ಮುಸ್ಲಿಂ ಸೇರಿ ಭಾವೈಕ್ಯತೆಯಿಂದ ಬಣ್ಣದೋಕುಳಿ ಆಚರಿಸಿದ್ದು ವಿಶೇಷವಾಗಿತ್ತು.