ಬಿಕೆಜಿ ಸಮೂಹ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

| Published : Aug 17 2024, 12:46 AM IST

ಬಿಕೆಜಿ ಸಮೂಹ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಮಗ್ರ ಅಭಿವೃದ್ಧಿಗೆ ನಮ್ಮಲ್ಲಿ ಒಗ್ಗಟ್ಟು ತುಂಬ ಅಗತ್ಯವಾಗಿದೆ.

ಸಂಡೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯಾನಂತರದಲ್ಲಿ ದೇಶವನ್ನು ಕಾಪಾಡಿದವರನ್ನು ಸ್ಮರಿಸಬೇಕಾಗಿದೆ ಮತ್ತು ಅವರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಬಿಕೆಜಿ ಸಮೂಹ ಸಂಸ್ಥೆಯ ಅಧ್ಯಕ್ಷ ಬಿ.ರುದ್ರಗೌಡ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಬಿಕೆಜಿ ಸಮೂಹ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬ್ರಿಟಿಷರು ದೇಶವನ್ನು ಯುಕ್ತಿಯಿಂದ ಗೆದ್ದಿದ್ದರು. ದೇಶದ ಸಮಗ್ರ ಅಭಿವೃದ್ಧಿಗೆ ನಮ್ಮಲ್ಲಿ ಒಗ್ಗಟ್ಟು ತುಂಬ ಅಗತ್ಯವಾಗಿದೆ. ನಾವೆಲ್ಲರೂ ಭಾರತೀಯರೆಂಬ ಭಾವನೆ ಇರಬೇಕು. ಒಡೆದು ಆಳುವ ನೀತಿ ದೇಶಕ್ಕೆ ಮಾರಕ ಎಂದರು.

ಹತಾತ್ಮ ಯೋಧರಾದ ಕಾಶಿರಾಯ್ ಬೊಮ್ಮನಹಳ್ಳಿಯವರ ಪತ್ನಿ ಸಂಗೀತ ಕಾಶಿರಾಯ್ ಬೊಮ್ಮನಹಳ್ಳಿ ಅವರನ್ನು ಬಿಕೆಜಿ ಸಮೂಹ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.

ಸಂಗೀತ ಸನ್ಮಾನ ಸ್ವೀಕರಿಸಿ ಮಾತನಾಡಿ, ವೀರಯೋಧರ ತ್ಯಾಗ, ಬಲಿದಾನದಿಂದ ಇಂದು ಜನತೆ ದೇಶದಲ್ಲಿ ನೆಮ್ಮದಿಯಿಂದ ಇರುವಂತಾಗಿದೆ. ಯಾವುದೇ ರೀತಿಯ ಕಷ್ಟದ ಸನ್ನಿವೇಶಗಳನ್ನು ಲೆಕ್ಕಿಸದೆ ತನ್ನ ದೇಶಕ್ಕಾಗಿಯೇ ಜೀವನವನ್ನು ಮುಡುಪಾಗಿಡುವವರು ಸೈನಿಕರು ಎಂದರು.

ಸಂಸ್ಥೆಯ ಟ್ರಸ್ಟಿ ವೀಣಾ ಪಾಟೀಲ್, ಪ್ರಾಚಾರ್ಯ ಕೆ.ವಿ. ಮೋಹನ್‌ರಾವ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಮರ್ ಕೋಚು, ಕವನ, ಸೌಜನ್ಯ, ಅಕ್ಷತ, ಸುಮನ್, ತರುಣ್ ಕಾರ್ಯಕ್ರಮ ನಿರ್ವಹಿಸಿದರು.

ಸಂಡೂರಿನ ಬಿಕೆಜಿ ಸಮೂಹ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಕಾಶಿರಾಯ್ ಬೊಮ್ಮನಹಳ್ಳಿ ಅವರ ಪತ್ನಿ ಸಂಗೀತಾ ಕಾಶಿರಾಯ್ ಬೊಮ್ಮನಹಳ್ಳಿ ಅವರನ್ನು ಬಿಕೆಜಿ ಸಮೂಹ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.