ವಿವಿಧಡೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ

| Published : Apr 13 2024, 01:03 AM IST

ಸಾರಾಂಶ

ಮುದಗಲ್ ಕೋಟೆ ಮುಂಭಾಗ ಈದಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮುದಗಲ್: ಮುಸ್ಲಿಂ ಬಾಂಧವರು ಒಂದು ತಿಂಗಳು ಉಪವಾಸ ವೃತ ಆಚರಿಸಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸಂಭ್ರಮ ಸಡಗರದಿಂದ ರಂಜಾನ್‌ನ್ನು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.

ಪಟ್ಟಣದ ಕೋಟೆ ಮುಂಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಮತ್ತು ಬಾಗಲಕೋಟ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಸಾವಿರಾರು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೋಟೆ ಮುಂಭಾಗದ ಈದ್ಗಾ ಮೈದಾನದಲ್ಲಿ ಇಸ್ಲಾಂ ಧರ್ಮದ ಗುರುಗಳಾದ ಮೌಲಾನ ಜಮೀರ ಅಹ್ಮದ ಖಾಜಿ ರಂಜಾನ್ ಹಬ್ಬದ ಕುರಿತು ವಿವರವಾದ ಮಾಹಿತಿ ನೀಡಿದ ಬಳಿಕ ವಿಶೇಷ ಪ್ರಾರ್ಥನೆಗೆ ಸಾನ್ನಿಧ್ಯವಹಿಸಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿಸಿದರು. ರಂಜಾನ್ ಹಬ್ಬದ ಉಪವಾಸ ವೃತ ಆಚರಿಸಿ ಅಲ್ಲಾಹನ ಕೃಪೆಗೆ ಪಾತ್ರರಾದವರು ವಿಶೇಷವಾದುದು ಎಂದರು.

ವಿಶೇಷ ಪ್ರಾರ್ಥನೆಯಲ್ಲಿ ಮುಖಂಡರಾದ ಎಂ.ಡಿ. ರಜಾಕ್, ಎಸ್.ಆರ್. ರಸೂಲ, ಸೈ. ನ್ಯಾಮತ್ಖಾದ್ರಿ, ಸೈಯ್ಯದ್ಸಾಬ, ರಜ್ಜಬಲಿ ಬೆಳ್ಳಿಕಟ್, ನಯೀಮ್, ಮಹಿಬೂಬಸಾಬ ಬಾರಿಗಿಡ, ಮಹಿಬುಬಸಾಬ ಕಾಲೇಗಾರ, ಮಹಿಬುಬ ಕಡ್ಡಿಪುಡಿ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.