ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀನಿಜಶರಣ ಅಂಬಿಗರ ಚೌಡಯ್ಯ ೯೦೪ನೇ ಜಯಂತೋತ್ಸವ ಮತ್ತು ಸಭಾ ಕಾರ್ಯಕ್ರಮವನ್ನು ಜ.೨೨ರಂದು ಬೆಳಗ್ಗೆ ೧೧ಗಂಟೆಗೆ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದೇವೆ ಎಂದು ಶ್ರೀರಂಗಪಟ್ಟಣ ತಾಲೂಕು ಗಂಗಾಮತಸ್ಥರ ಸಂಘದ ನಿರ್ದೇಶಕ ಗಾಮನಹಳ್ಳಿ ಪ್ರಕಾಶ್ ಹೇಳಿದರು.ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘದ ಮುಖಂಡರು ಆಯೋಜಿಸಿದ್ದ ಸಮುದಾಯ ಕುಂದುಕೊರತೆ- ಚರ್ಚೆ ಸಭೆಯಲ್ಲಿ ಶ್ರೀನಿಜಶರಣ ಅಂಬಿಗರ ಚೌಡಯ್ಯ ಅವರ ೯೦೪ನೇ ಜಯಂತೋತ್ಸವದ ಆಹ್ವಾನ ಕರಕ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಪಟ್ಟಣದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಪೂರ್ವಕುಂಭ ಕಳಸಗಳೊಂದಿಗೆ ಮತ್ತು ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯ ಮೂಲಕ ರಾಜಬೀದಿಯಲ್ಲಿ ಮೆರವಣಿಗೆ ಸಾಗಲಿದೆ, ಬಳಿಕ ಸಭೆ ಆರಂಭಗೊಳ್ಳಲಿದೆ, ಗಣ್ಯರು ಮಾರ್ಗದರ್ಶ ನೀಡಲಿದ್ದಾರೆ, ಜಿಲ್ಲೆಯ ಗಂಗಾಮತಸ್ಥ (ಬೆಸ್ತರ) ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ಕರ್ನಾಟಕ ರಾಜ್ಯ ಗಂಗಾಮತಸ್ಥರ ನೌಕರ ಸಂಘದ ಗೌರವಾಧ್ಯಕ್ಷರು ಡಾ.ಟಿ ಕೃಷ್ಣಯ್ಯ, ಜಿಲ್ಲಾ ಗಂಗಾಮತಸ್ಥರ ಸಂಘದ ಸಹ ಕಾರ್ಯದರ್ಶಿ ಹಾಡ್ಯ ಉಮೇಶ್, ಮಂಡ್ಯ ತಾಲೂಕು ಮಹಿಳಾ ಗಂಗಾಮತಸ್ಥರ ಸಂಘದ ಅಧ್ಯಕ್ಷೆ ಲಿಂಗರಾಜಮ್ಮ, ಉಪಾಧ್ಯಕ್ಷೆ ಶಶಿಕಲಾ ಮರಡಿಪುರ, ಕಾರ್ಯದರ್ಶಿ ರಾಧಾ, ಜಿಲ್ಲಾ ನಿರ್ದೇಶಕ ದೇಶಹಳ್ಳಿ ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ, ಶ್ರೀಗಂಗಾಪರಮೇಶ್ವರಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಿ.ಎಸ್ ಸಿದ್ದಯ್ಯ, ಕನ್ನಲಿ ಈರಯ್ಯ, ತೊರೆಬೊಮ್ಮನಹಳ್ಳಿ ಆರ್.ಚಿಕ್ಕಯ್ಯ, ಹಾಸನ ಸಿ.ಕೆ.ಕುಮಾರ್, ನಿರ್ದೇಶಕಿ ಡಿ ಶಿಲ್ಪ, ಬೂದನೂರು ಚಿಕ್ಕಲಿಂಗಯ್ಯ, ಶ್ರೀಧರ್ ಮತ್ತಿತರರಿದ್ದರು.
ನಾಳೆ ಅಂಬಿಗರ ಚೌಡಯ್ಯ ಜಯಂತಿಮಂಡ್ಯ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಆಶ್ರಯದಲ್ಲಿ ಜ.21 ರಂದು 2024-25 ನೇ ಸಾಲಿನ ಅಂಬಿಗರ ಚೌಡಯ್ಯ ಜಯಂತಿಯನ್ನು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹಾಗೂ ಸಂಸದ ಹೆಚ್.ಡಿ.ಕುಮಾರಸ್ವಾಮಿ ಘನ ಉಪಸ್ಥಿತಿ ವಹಿಸಲಿದ್ದಾರೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು , ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಯೀಂ, ನಗರಸಭೆ ಸರ್ವ ಸದಸ್ಯರು ಹಾಗೂ ಎಲ್ಲಾ ಸಂಘ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಾಹಿತಿ ಡಾ.ಪ್ರದೀಪ್‌ಕುಮಾರ್ ಉಪನ್ಯಾಸ ನೀಡಲಿದ್ದಾರೆ.