ಕನಕಪುರ: ದೇಗುಲಮಠದ ಹಳೆಯ ಮಠದ ಅಭಿವೃದ್ಧಿಗೆ ಭಕ್ತರು ಹಾಗೂ ಹಿರಿಯ ವಿದ್ಯಾರ್ಥಿಗಳು ದೇಣಿಗೆ ಸಹಕಾರ ಅಗತ್ಯ ಎಂದು ದೇಗುಲ ಮಠದ ಕಿರಿಯ ಚನ್ನಬಸವ ಸ್ವಾಮೀಜಿ ಮನವಿ ಮಾಡಿದರು. ದೇಗುಲಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಡಾ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯ ೮೪ನೇ ಗುರುವಂದನೆ, ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಆಶೀರ್ವಚನ ನೀಡಿ, ಮಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಆಯೋಜಿಸುವ ಸಂಕಲ್ಪ ಮಾಡಿದ್ದು, ಪ್ರಮುಖವಾಗಿ ಮಠಕ್ಕೆ ಒಂದು ದಾಸೋಹ ಭವನದ ಅಗತ್ಯವಿದೆ. ಆದ್ದರಿಂದ ಹಳೆಯ ವಿದ್ಯಾರ್ಥಿಗಳು, ಭಕ್ತರು ನಿಮ್ಮ ಶಕ್ತಾನುಸಾರ ದೇಣಿಗೆ ಅರ್ಪಿಸಬಹುದು ಎಂದರು. ಈ ವೇಳೆ ಮಲೈ ಮಹದೇಶ್ವರ ಬೆಟ್ಟದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ, ಬಿಲ್ವಪತ್ರೆ ಮಠದ ಶಿವಲಿಂಗ ಸ್ವಾಮೀಜಿ, ಅತ್ತಿಹಳ್ಳಿ ಮಠದ ಮಹಲಿಂಗ ಸ್ವಾಮೀಜಿ, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಕುಮಾರಸ್ವಾಮಿ ಸೇರಿದಂತೆ 25ಕ್ಕೂ ಹೆಚ್ಚು ಹರಗುರು ಚರಮೂರ್ತಿಗಳು, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆಕೆಪಿ ಸುದ್ದಿ 01:
ಕನಕಪುರದ ದೇಗಲ ಮಠದ ಡಾ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ೮೪ನೇ ಗುರುವಂದನೆ ಸಮಾರಂಭದಲ್ಲಿ ಚನ್ನಬಸವ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶರತ್‌ಚಂದ್ರ ಸ್ವಾಮೀಜಿ, ಶಿವಕುಮಾರ್, ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮುಮ್ಮಡಿ ನಿರ್ವಾಣ ಶ್ರೀಗಳ ಜಯಂತ್ಯುತ್ಸವ, ಗುರುವಂದನೆ
ಕನಕಪುರ: ದೇಗುಲಮಠದ ಹಳೆಯ ಮಠದ ಅಭಿವೃದ್ಧಿಗೆ ಭಕ್ತರು ಹಾಗೂ ಹಿರಿಯ ವಿದ್ಯಾರ್ಥಿಗಳು ದೇಣಿಗೆ ಸಹಕಾರ ಅಗತ್ಯ ಎಂದು ದೇಗುಲ ಮಠದ ಕಿರಿಯ ಚನ್ನಬಸವ ಸ್ವಾಮೀಜಿ ಮನವಿ ಮಾಡಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.