ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಇತಿಹಾಸ ಪ್ರಸಿದ್ಧವಾದ ಕಾರ್ಕಳ ಸಮೀಪದ ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಭಾನುವಾರ ದಿವ್ಯಬಲಿ ಪೂಜೆಯ ಮೂಲಕ ಸಂತ ಸೆಬಾಸ್ಟಿಯನರ ಹಬ್ಬವನ್ನು ಆಚರಿಸಲಾಯಿತು.
ದಿವ್ಯ ಜ್ಯೋತಿ ಸಂಚಾಲಕ ಸಿರಿಲ್ ಲೋಬೊ ಪ್ರಧಾನ ಗುರುಗಳಾಗಿ ಪೂಜೆ ನೆರವೇರಿಸಿದರು. ನಂತರ ಸಂತ ಸೇಬಸ್ಟಿಯನ್ ನರಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಆಶೀರ್ವಚನ ನೀಡಲಾಯಿತು.
ಇದೇ ವೇಳೆ ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಿಟ್ಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿತಿನ್ ಸಾಲಿಯಾನ್, ಪಂಚಾಯಿತಿ ಸದಸ್ಯರಾದ ರಾಜೇಶ್, ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರು ಆಲ್ಬನ್ ಡಿಸೋಜ, ಸಹಾಯಕ ಧರ್ಮಗುರು ಲ್ಯಾರಿ ಪಿಂಟೊ.
ಆಧ್ಯಾತ್ಮಿಕ ಧರ್ಮಗುರು ರೋಮನ್ ಮಸ್ಕೇರೆನ್ಹಸ್, ದಿವ್ಯಜ್ಯೋತಿಯ ನಿರ್ದೇಶಕ ಸಿರಿಲ್ ಲೋಬೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕಿ ಬೆನ್ನಡಿಕ್ಟ ನೋರೊನ್ಹ ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಮಾತನಾಡಿದ ಪಂಚಾಯಿತಿ ಉಪಾಧ್ಯಕ್ಷ ನಿತಿನ್ ಸಾಲ್ಯಾನ್, ಈ ಹಬ್ಬ ನಮ್ಮ ಊರಿನ ಜಾತ್ರೆಯಾಗಿದೆ. ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಧರ್ಮಗುರು ಲ್ಯಾರಿ ಪಿಂಟೊ ಪ್ರಾರ್ಥನೆ ಮೂಲಕ ಆಶೀರ್ವಚನ ನೀಡಿದರು. ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಕಾರ್ಯಕ್ರಮ ನಿರ್ವಹಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ ವಂದಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.