ಸಾರಾಂಶ
ಯರಗಟ್ಟಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಮುಖಂಡ ಅಜೀತಕುಮಾರ ದೇಸಾಯಿ ಮಾತನಾಡಿ, ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದಾರೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿತ್ತು. ಆದರೆ ಬೆಳಗಾವಿ ಲೋಕಸಭಾ ಮತದಾರರು ಹಣ ನೋಡದೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜಗದೀಶ ಶೆಟ್ಟರ ಅವರನ್ನು ಕೈಹಿಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸದಾನಂದ ಹಣಬರ, ಕೃಷ್ಣಪೂರ್ತಿ ತೊರಗಲ್, ಸಂತೋಷ ವಾಲಿ, ಸುನೀಲ ಬೂದಿಗೊಪ್ಪ, ಗೋವಿಂದ ಪೂಜೇರ, ಮುದಕಪ್ಪ ತಡಸಲೂರ, ಪ್ರವೀಣ ಬೆಣ್ಣೆ, ಮುದಕಪ್ಪ ರವಿ, ಮಂಜುನಾಥ ಕೊಪ್ಪದ, ದುಂಡಯ್ಯ ಹಿರೇಮಠ, ಸೋನು ತಲ್ಲೂರು, ಪಿಂಟು ಮಠಪತಿ, ವಿನಾಯಕ ಇಟ್ನಾಳ ಸೇರಿದಂತೆ ಅನೇಕ ಇದ್ದರು