ಸಾರಾಂಶ
-ಬೆಳಗಾವಿ ಐಹಾಸಿಕ ಸಮಾವೇಶದ ಪೂರ್ವಭಾವಿ ಸಭೆ । ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಕ್ಷ ಸಂಘಟಿಸಿ: ಹಾಲಪ್ಪ
---ಕನ್ನಡಪ್ರಭವಾರ್ತೆ ಚಳ್ಳಕೆರೆ
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಕರ್ನಾಟಕ ಹೆಬ್ಬಾಗಿಲು ಬೆಳಗಾವಿಗೆ 1924ರಲ್ಲಿ ಆಗಮಿಸಿ ಪಕ್ಷದ ಸಮಾವೇಶವನ್ನು ನಡೆಸಿ ಇಂದಿಗೆ ೧೦೦ ವರ್ಷ ಸಂದಿವೆ. ಇದರ ಸವಿನೆನಪಿಗಾಗಿ ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶವನ್ನು ಡಿ. 27 ರಂದು ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಆಗಮಿಸುವಂತೆ ಕೆಪಿಸಿಸಿ ಉಪಾಧ್ಯಕ್ಷ, ಸಮಾವೇಶದ ಜಿಲ್ಲಾ ಉಸ್ತುವಾರಿ ಮುರುಳಿದರ ಹಾಲಪ್ಪ ತಿಳಿಸಿದರು.ಅವರು, ಗುರುವಾರ ಶಾಸಕರ ಭವನದಲ್ಲಿ ಪರಶುರಾಮಪುರ ಮತ್ತು ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೆಳಗಾವಿ ಸಮಾವೇಶದ ಪೂರ್ವ
ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಮತ್ತು ರಾಷ್ಟ್ರದಲ್ಲಿ ಶತಮಾನಗಳನ್ನು ಕಳೆದ ಏಕೈಕ ಪಕ್ಷ ಕಾಂಗ್ರೆಸ್. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಲ್ಲದೆ, ಕೋಟ್ಯಂತರ ಬಡ ಜನರಿಗೆ ನೆಮ್ಮದಿಯ ಬದುಕು ನೀಡಿದ್ದು, ಕಾಂಗ್ರೆಸ್ ಪಕ್ಷ. ದೇಶದ ಇತಿಹಾಸದಲ್ಲಿ ಬಡವರು, ಕಾರ್ಮಿಕರು, ಮಹಿಳೆಯರು, ಯುವಕರಿಗೆ ಸಕಾಲದಲ್ಲಿ ನೆರವು ನೀಡಿ ಅವರ ಬದುಕನ್ನು ಉತ್ತಮಪಡಿಸುವಲ್ಲಿ ಪಕ್ಷ ಸದಾ ಕಾರ್ಯನಿರ್ವಹಿಸುತ್ತಾ ಬಂದಿದೆ.ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಜಾರಿಗೆ ತರುವ ಮೂಲಕ ಕರ್ನಾಟಕ ಬಡ ಜನರಿಗೆ ಹೊಸ ಆತ್ಮವಿಶ್ವಾಸ ತುಂಬಿದೆ. ಬಿಜೆಪಿಯ ಸುಳ್ಳು ಆರೋಪಗಳಿಗೆ ಜನತೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ.
ಬೆಳಗಾವಿಯ ಐತಿಹಾಸಿಕ ಸಮಾವೇಶಕ್ಕೆ ಹಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದರು.ಕೆಪಿಸಿಸಿ ಜಿಲ್ಲಾಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲೆಯ ಎಲ್ಲಾ ಬ್ಲಾಕ್‌ಗಳಲ್ಲಿ ಐತಿಹಾಸಿಕ ಸಮಾವೇಶವನ್ನು ಯಶಸ್ವಿಗೊಳಿಸುವಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಸಮಾವೇಶದ ರೂಪುರೇಷೆಗಳ ಕುರಿತು ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರಹಾಲಪ್ಪ ಸಾಕಷ್ಟು ಮಾಹಿತಿ ನೀಡಿದ್ಧಾರೆ.
ಕನಿಷ್ಠಪಕ್ಷ ಎರಡು ಸಾವಿರ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.ಜಿಲ್ಲಾ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರ.ಕಾ ಸಂಪತಕುಮಾರ್, ಡಿ.ಮೈಲಾರಪ್ಪ, ಹಿರಿಯ ಮುಖಂಡ ಟಿಎಟಿಪ್ರಭುದೇವ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚನ್ನಕೇಶವ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಫೇಸ್ವಾಮಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಸದಸ್ಯರಾದ ಸುಮ, ಶಿಲ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವೀರಭದ್ರಪ್ಪ, ಪರಶುರಾಮಪುರ ಅಧ್ಯಕ್ಷ ಶಶಿಧರ, ಕರಕುಶಲ ಪರಿಷತ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಯಿ, ಬಿ.ಎಂ.ಭಾಗ್ಯಮ್ಮ, ವಾಣಿ, ಮಂಜುಳಾ, ನಾಮಿನಿ ಸದಸ್ಯರಾದ ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ಆರ್.ವೀರಭದ್ರಪ್ಪ, ನಟರಾಜು, ನೇತಾಜಿ ಪ್ರಸನ್ನ, ಎಂ.ಚೇತನ್‌ಕುಮಾರ್, ಚೌಳೂರು ಪ್ರಕಾಶ್, ಎಲ್‌ಐಸಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
-------ಪೋಟೋ: ಚಳ್ಳಕೆರೆ ನಗರ ಶಾಸಕರ ಭವನದಲ್ಲಿ ಬೆಳಗಾವಿ ಐಹಾಸಿಕ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಸಮಾವೇಶದ ಜಿಲ್ಲಾ ಉಸ್ತುವಾರಿ ಮುರುಳಿದರಹಾಲಪ್ಪ ಮಾತನಾಡಿದರು.
೧೯ಸಿಎಲ್‌ಕೆ೧