ಗ್ರಂಥಾಲಯ ಜ್ಞಾನ ದಾನದ ಕೇಂದ್ರ

| Published : Feb 26 2024, 01:36 AM IST

ಸಾರಾಂಶ

ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳಾಗಿವೆ. ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ.

ಕುಷ್ಟಗಿ: ತಾಲೂಕಿನ ಮಿಯಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಗ್ರಂಥಾಲಯ ಉದ್ಘಾಟಿಸಲಾಯಿತು.

ಬಳಿಕ ಮಾತನಾಡಿದ ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರು, ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ ಮಾತನಾಡಿ, ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಪ್ರಮುಖವಾದದ್ದು, ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳಾಗಿವೆ. ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ. ಪುಸ್ತಕ ಮನುಷ್ಯನ ಮಿತ್ರ ಜ್ಞಾನ ನೀಡುವ ಕಾಮಧೇನು ವ್ಯಕ್ತಿತ್ವ ನಿರ್ಮಾಣದ ಹೆಬ್ಬಾಗಿಲು ಓದುಗರಿಗೆ ಗ್ರಂಥಾಲಯ ಒಂದು ವರವಿದ್ದಂತೆ, ನಮ್ಮ ಶಾಲೆಯ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಮಕ್ಕಳು ಓದುವುದರ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಿ ಉತ್ತಮ ಪ್ರಜೆಗಳಾಗಿರಿ ಮತ್ತು ಟಾಟಾ ಟ್ರಸ್ಟಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಟಾಟಾ ಟಸ್ಸಿನ ನೋಡಲ್ ಅಧಿಕಾರಿ ರಾಜಕುಮಾರ, ಗ್ರಾಪಂ ಸದಸ್ಯರಾದ ಗವಿಸಿದ್ದಪ್ಪ ಕುದುರಿ, ಶರಣಗೌಡ ಮ್ಯಾಗೇರಿ ಹಾಗೂ ಶಾಂತಾಬಾಯಿ ಪಟ್ಟಣಶೆಟ್ಟಿ, ಪರಶುರಾಮ ನಾಗಣ್ಣನವರ, ಶಿಕ್ಷಕರಾದ ಸದಾಶಿವಯ್ಯ ಶಿರೂರ, ನಾಗನಗೌಡ ಪೊಲೀಸ್ ಪಾಟೀಲ್, ಅಕ್ಕಮಹಾದೇವಿ ಹಿರೇಮಠ, ಜಯಶ್ರೀ ಮದ್ಲೂರ, ಲಕ್ಷ್ಮೀ ವಾಲಿಕಾರ, ಸುಮಂಗಲಾ ಕುದುರಿ ಉಪಸ್ಥಿತರಿದ್ದರು.