ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರ ರಾಜ್ಯ ಸರ್ಕಾರಗಳು ದುಡಿಯುವಜನರ ಹಿತರಕ್ಷಣೆಗೆ ಮತ್ತು ಅವರ ನ್ಯಾಯಬದ್ದವಾದ ಹಕ್ಕುಗಳನ್ನು ರಕ್ಷಿಸುವಲ್ಲಿ ಆಸಕ್ತಿ ತೋರದೆ ಇರುವುದು ನ್ಯಾಯ ಸಮ್ಮತ ನಡೆಯಲ್ಲ , ಇದನ್ನು ಬದಲಿಸುವಂತೆ ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು ತ್ರೈಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ದಿನಕ್ಕೆ 14 ಗಂಟೆಯ ದುಡಿಮೆಗೆ ದೂಡುವ ನೀತಿಗಳು ದೇಶದಲ್ಲಿ ಇನ್ನಷ್ಟು ನಿರುದ್ಯೋಗವನ್ನು ಸೃಷ್ಟಿಸಲಿದೆ ಎಂದ ಅವರು ವಿವಿಧ ದೇಶಗಳಲ್ಲಿ ಇರುವಂತೆ, ಕಾರ್ಮಿಕರ ಚಳುವಳಿಯು ದಿನದಲ್ಲಿ 6 ಗಂಟೆಯ ಕೆಲಸದ ಅವಧಿ, ವಾರದಲ್ಲಿ 5 ದಿನದ ಕೆಲಸಕ್ಕೆ ಒತ್ತಾಯಿಸುವತ್ತಿರುವಾಗ ದಿನಕ್ಕೆ 14 ಗಂಟೆಯ ಕೆಲಸದ ಸೂಚನೆ ಹಿಮ್ಮುಖ ಚಲನೆ ಎಂದು ಅಪಾದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ ಜನತೆ ನಿರಿಕ್ಷೆಗಳನ್ನು ಹುಸಿ ಮಾಡಿ ದೇಸಿ ವಿದೇಶಿ ಬಂಡವಾಳಗಾರರಿಗೆ ಜನತೆಯ 3.5 ಲಕ್ಷಕೋಟಿ ಹಣವನ್ನು ಈ ಬಜೆಟ್ ನಲ್ಲಿ ನೀಡಿದೆ. ದುಡಿಯುವ ಜನರಿಗೆ ಏನು ನೀಡಿಲ್ಲ ಎಂದು ಅಪಾದಿಸಿದರು.ಜಿಲ್ಲಾ ಖಜಾಂಚಿ ಎ. ಲೋಕೇಶ್, ಕಟ್ಟಡ ಕಾರ್ಮಿಕರ ಸಂಘದ ಬಿ. ಉಮೇಶ್, ಕಲೀಲ್ ಆಂಗನವಾಡಿ ನೌಕರರ ಸಂಘದ ಅನುಸೂಯ , ಪಾರ್ವತಮ್ಮ, ಮನೆ ಕೆಲಸ ಗಾರ ಸಂಘದ ಮಮತ, ನಸೀಮಾ, ಬೀಡಿಕಾರ್ಮಿಕರ ಸಂಘದ ಅಬ್ದುಲ್ ಮುನಾಪ್, ರಂಗಧಾಮಯ್ಯ, ಸುಜೀತ್ ನಾಯಕ್ ಮಾತನಾಡಿದರು.