ಹೊಸ ಆರ್ಥಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದರೂ ಕೇಂದ್ರ ಸರ್ಕಾರದ ವಿಬಿ-ಜಿ ರಾಮ್‌ಜಿ ಇನ್ನೂ ಟೇಕಾಫ್ ಆಗಿಲ್ಲ. ಎರಡು ದಶಕದಿಂದ ಜಾರಿಯಲ್ಲಿದ್ದು, ಗ್ರಾಮೀಣರಿಗೆ ಆಸರೆಯಾಗಿದ್ದ ಮನರೇಗಾ ಯೋಜನೆ ಮುಂದುವರೆಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಗೆ ಮೊರೆ ಹೋಗಲು ನಿರ್ಧರಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಹೊಸ ಆರ್ಥಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದರೂ ಕೇಂದ್ರ ಸರ್ಕಾರದ ವಿಬಿ-ಜಿ ರಾಮ್‌ಜಿ ಇನ್ನೂ ಟೇಕಾಫ್ ಆಗಿಲ್ಲ. ಎರಡು ದಶಕದಿಂದ ಜಾರಿಯಲ್ಲಿದ್ದು, ಗ್ರಾಮೀಣರಿಗೆ ಆಸರೆಯಾಗಿದ್ದ ಮನರೇಗಾ ಯೋಜನೆ ಮುಂದುವರೆಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಗೆ ಮೊರೆ ಹೋಗಲು ನಿರ್ಧರಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಮಲ್ಲಿಗಾರ ಗ್ರಾಮದಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ೨೦ ಲಕ್ಷ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಗ್ರಾಮೀಣರ ಅಭ್ಯುದಯದ ಹಿತದೃಷ್ಟಿಯಿಂದ ಮನರೇಗಾ ಯೋಜನೆ ಮುಂದುವರೆಸುವುದು ಅನಿವಾರ್ಯವಾಗಿದೆ. ಆದರೆ ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ಜಿ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದುವರೆಗೆ ಅಧಿಸೂಚನೆ ಸಹ ಹೊರಡಿಸಿಲ್ಲ. ಯೋಜನೆ ಜಾರಿಗೂ ಮೊದಲು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ಸಹ ನಡೆಸಿಲ್ಲ ಎಂದು ಹೇಳಿದ ಅವರು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಗ್ರಾಮಗಳ ಒಳಗಿನ ರಸ್ತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೂಲಭೂತ ಸೌಲಭ್ಯಗಳ ಹೆಚ್ಚಳಕ್ಕೂ ಒತ್ತು ನೀಡಲಾಗಿದೆ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಮುಖಂಡರಾದ ದಿವಾನಸಾಬ ಮಾಸನಕಟ್ಟಿ, ಈರಣ್ಣ ಬೈಲವಾಳ, ಅಶೋಕ ಅಡವಿ, ಸಿದ್ರಾಮಪ್ಪ ಹಾವೇರಿ, ಶಿವರಾಯಪ್ಪ ಅಡವೇರ, ಮಲ್ಲೇಶಪ್ಪ ಹಾವೇರಿ, ಗಂಗಾಧರ ಲಮಾಣಿ, ಕೃಷ್ಣಪ್ಪ ನಾಯ್ಕ, ಕೃಷ್ಣಪ್ಪ ಲಮಾಣಿ, ಕಲೀಂ ಮಾಸನಕಟ್ಟಿ, ಬಾಬುಸಾಬ ಹಾನಗಲ್, ಮೂಕಪ್ಪ ಲಮಾಣಿ, ರಮೇಶ ನಾಯ್ಕ, ಸಂಜು ಲಮಾಣಿ, ಮೆಹಬೂಬಅಲಿ ಹುಬ್ಬಳ್ಳಿ, ಬಸವರಾಜ ಅಡವಿ, ಬಸವರಾಜ ಅಡವೇರ, ಲಕ್ಷ್ಮಣ ಲಮಾಣಿ, ಬಸನಗೌಡ ಪಾಟೀಲ ಇದ್ದರು.