ಎಂಎಸ್‌ಪಿ ಅಡಿ ಉದ್ದು, ಸೋಯಾಬೀನ್ ಖರೀದಿಗೆ ಕೇಂದ್ರ ಅನುಮತಿ: ಸಚಿವ ಜೋಶಿ

| Published : Aug 31 2024, 01:38 AM IST

ಎಂಎಸ್‌ಪಿ ಅಡಿ ಉದ್ದು, ಸೋಯಾಬೀನ್ ಖರೀದಿಗೆ ಕೇಂದ್ರ ಅನುಮತಿ: ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ರೈತರು ಬೆಳೆದ 19,760 ಮೆಟ್ರಕ್ ಟನ್ ಉದ್ದಿನ ಬೇಳೆ ಹಾಗೂ 1,03,315 ಮೆಟ್ರಕ್ ಟನ್ ಸೋಯಾಬಿನ್ ಬೆಳೆ ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.

ಹುಬ್ಬಳ್ಳಿ:

ಕೇಂದ್ರ ಸರ್ಕಾರದಿಂದ ಉದ್ದು ಮತ್ತು ಸೋಯಾಬೀನ್ ಖರೀದಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಕರ್ನಾಟಕದಲ್ಲಿ 2024-25ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯ ಅಡಿ ಉದ್ದು ಮತ್ತು ಸೋಯಾಬೀನ್ ಖರೀದಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಅನುಮತಿ ನೀಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ ಎಂಎಸ್‌ಪಿ ಅಡಿಯಲ್ಲಿ ಉದ್ದು ಮತ್ತು ಸೋಯಾಬಿನ್ ಬೆಳೆಗಳಿಗೆ ಪ್ರತಿ ಕ್ವಿಂಟಲ್‌ಗೆ ₹ 7400 ಮತ್ತು ₹ 4,892 ಮೌಲ್ಯದಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ.

ರಾಜ್ಯದ ರೈತರು ಬೆಳೆದ 19,760 ಮೆಟ್ರಕ್ ಟನ್ ಉದ್ದಿನ ಬೇಳೆ ಹಾಗೂ 1,03,315 ಮೆಟ್ರಕ್ ಟನ್ ಸೋಯಾಬಿನ್ ಬೆಳೆ ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರ ತಕ್ಷಣವೇ ರಾಜ್ಯಾದ್ಯಂತ ಖರೀದಿ ಕೇಂದ್ರ ಆರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ವಿನಂತಿಸಿದ್ದಾರೆ. ರಾಜ್ಯದ ರೈತರ ಸಮಸ್ಯೆಗೆ ಸತತವಾಗಿ ಸ್ಪಂದಿಸಿ ಬೆಳೆಗಳ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ.