ಸಾರಾಂಶ
ರಾಜ್ಯದ ಪರವಾನಿಗೆ ರಹಿತ ತಂಬಾಕು ಬೆಳಗಾರರ ತಂಬಾಕು ಬೆಳಗಾರರು ಬಹಳ ತೊಂದರೆಯಲ್ಲಿ ಇದ್ದು ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇಸ್ಪಂದಿಸಿ ಪರವಾನಗಿ ರಹಿತ ತಂಬಾಕು ಮಾರಾಟಕ್ಕೆ ಅವಕಾಶ ನೀಡಿರುವುದಕ್ಕೆ ಶಾಸಕ ಎ. ಮಂಜು ಹರ್ಷ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಜ್ಯದ ಪರವಾನಿಗೆ ರಹಿತ ತಂಬಾಕು ಬೆಳಗಾರರ ತಂಬಾಕು ಬೆಳಗಾರರು ಬಹಳ ತೊಂದರೆಯಲ್ಲಿ ಇದ್ದು ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇಸ್ಪಂದಿಸಿ ಪರವಾನಗಿ ರಹಿತ ತಂಬಾಕು ಮಾರಾಟಕ್ಕೆ ಅವಕಾಶ ನೀಡಿರುವುದಕ್ಕೆ ಶಾಸಕ ಎ. ಮಂಜು ಹರ್ಷ ವ್ಯಕ್ತಪಡಿಸಿದರು.ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ರಾಮನಾಥಪುರ, ಪಿರಿಯಾಪಟ್ಟಣ, ಹೆಗ್ಗಡದೇವನ ಕೋಟೆ, ಹುಣಸೂರು ಮುಂತಾದ ಕಡೆಗಳಲ್ಲಿ ಪರವಾನಿಗೆ ರಹಿತ ಬೆಳೆಯಲಾಗಿರುವ ತಂಬಾಕಿನ ಮಾರಾಟಕ್ಕೆ ಅವಕಾಶವನ್ನು ದೊರೆತಿದೆ ಎಂದು ತಿಳಿಸಿದರು.
ಇತ್ತೀಚೆಗೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ರಾಜ್ಯದಲ್ಲಿ ಪರವಾನಿಗೆ ರಹಿತ ತಂಬಾಕು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಈ ಕುರಿತು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ರಾಜ್ಯದ ತಂಬಾಕು ಪರವಾನಿಗೆ ಇಲ್ಲದ ಕಾರ್ಡ್‌ದಾರರ ತಂಬಾಕು ಬೆಳಗಾರರಿಗೆ ತಂಬಾಕು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಶೀಘ್ರವೇ ಅವಕಾಶ ಕಲ್ಪಿಸುವೆ. ಈ ಬಗ್ಗೆ ತಂಬಾಕು ಬೆಳೆಗಾರರು ಆತಂಕ ಪಡುವುದು ಬೇಡ, ಇದಕ್ಕೆ ಕೇಂದ್ರ ವಾಣಿಜ್ಯ ಸಚಿವರ ಹತ್ತಿರ ಮಾತನಾಡಿ, ಪರಿಹಾರ ಕಲ್ಪಿಸುವುದಾಗಿ ಭರವಸೆಯನ್ನು ನೀಡಿದರು.ರಾಜ್ಯದ ರಾಮನಾಥಪುರ ಹಾಗೂ ಮುಂತಾದ ಕಡೆಗಳಲ್ಲಿ ವಾಣಿಜ್ಯ ಬೆಳೆ ತಂಬಾಕು ಮಾರುಕಟ್ಟೆಗಳು ಇದ್ದು, ರೈತರು ಬೆಳೆಗಾರರ ಸಂಕಷ್ಟ ನನಗೆ ಅರಿವಿದೆ. ಶ್ರೀಘವೇ ಕೇಂದ್ರದ ವಾಣಿಜ್ಯ ಸಚಿವರು ಪಿಯೂಷ್ ಗೋಯಲ್‌ರೊಂದಿಗೆ ಮಾತನಾಡಿ ಭರವಸೆ ನೀಡಿದಂತೆ ಕೇವಲ ಒಂದೇ ವಾರದಲ್ಲಿ ಕೇಂದ್ರ ಸಚಿವರು ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದ ಬೆಳೆಗಾರರಿಗೆ ಪರವಾನಿಗೆ ರಹಿತ ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಕೇಂದ್ರ ಸಚಿವರು ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಾಣಿಜ್ಯ ಇಲಾಖೆಯ ಸಚಿವರು ಪೀಯೂಷ್ ಗೋಯಲ್ ಅವರಿಗೆ ಕೃತಜ್ಞತೆಯನ್ನು ಶಾಸಕ ಎ. ಮಂಜು ಸಲ್ಲಿಸಿದರು.