ಶ್ರೀಕವೀಂದ್ರ ತೀರ್ಥರ ಮಧ್ಯಾರಾಧನೆ

| Published : Apr 07 2025, 12:33 AM IST

ಸಾರಾಂಶ

ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ಮೂಲ ರಾಮದೇವರು ಹಾಗೂ ಮೊದಲಾದ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಫಲಪಂಚಾಮೃತ ಅಭಿಷೇಕ ನಡೆಯಿತು.

ಗಂಗಾವತಿ:

ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ ಶ್ರೀ ಕವೀಂದ್ರ ತೀರ್ಥರ ಮಧ್ಯಾರಾಧನೆ ಭಾನುವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ಮೂಲ ರಾಮದೇವರು ಹಾಗೂ ಮೊದಲಾದ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಫಲಪಂಚಾಮೃತ ಅಭಿಷೇಕ ನಡೆಯಿತು. ಶ್ರೀ ಕವೀಂದ್ರ ತೀರ್ಥರ ಮಧ್ಯಾರಾಧನೆ ನಿಮಿತ್ತ ನವ ವೃಂದಾವನಗಳಿಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಶ್ರೀಕವೀಂದ್ರ ತೀರ್ಥರ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ, ರಜತ ಕವಚ ಅಲಂಕಾರ, ರೇಷ್ಮೆ ವಸ್ತ್ರ ಅಲಂಕಾರ, ಹಸ್ತೋದಕ ಅಲಂಕಾರ, ಬ್ರಾಹ್ಮಣ ಸಂತರ್ಪಣೆ, ತೀರ್ಥಪ್ರಸಾದ, ಅಷ್ಟೋತ್ತರ ಪಾರಾಯಣ ಮಾಡಲಾಯಿತು.

ಪಂಡಿತರಾದ ರಿತ್ತಿ ವೆಂಕಟೇಶ ಆಚಾರ್, ದ್ವಾರಕನಾಥ ಆಚಾರ, ಸುಳಾದಿ ಹನುಮೇಶ ಆಚಾರ್, ಹೊಸಪೇಟೆಯ ಮಠಾಧಿಕಾರಿಗಳಾದ ಪವನ, ಹೊಸಪೇಟೆಯ ಪದ್ಮನಾಭ, ಶ್ರೀಧರ್ ಆಚಾರ, ಗಂಗಾವತಿ ಮಠಾಧಿಕಾರಿಗಳಾದ ಸುಶೀಲೇಂದ್ರ ಆಚಾರ, ಗುಂಜಾಳ್ಳಿ ಮುರಳಿ ಆಚಾರ, ಶ್ಯಾಮಚಾರ, ಇಡಪನೂರ್ ಸಂಜೀವ ಕುಲಕರ್ಣಿ, ಸುಮಂತ ಕುಲಕರ್ಣಿ, ಮಠದ ವ್ಯವಸ್ಥಾಪಕ ಸಮಾವೇದ ಗುರುರಾಜ ಆಚಾರ್, ವಿಜಯ ಡಣಾಪುರ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.