ಸಿರಿಧಾನ್ಯ ಬಳಕೆಯಿಂದ ರೋಗಗಳಿಂದ ಮುಕ್ತಿ ಸಾಧ್ಯ-ಡಾ. ಖಾದರ್‌

| Published : Jan 08 2024, 01:45 AM IST

ಸಿರಿಧಾನ್ಯ ಬಳಕೆಯಿಂದ ರೋಗಗಳಿಂದ ಮುಕ್ತಿ ಸಾಧ್ಯ-ಡಾ. ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪೂರ್ವಜರು ಬಳಸುತ್ತಿದ್ದ ಆಹಾರ ಪದ್ಧತಿ ಅದರಲ್ಲೂ ಮುಖ್ಯವಾಗಿ ಸಿರಿಧಾನ್ಯ ಬಳಕೆಯ ನಮ್ಮನ್ನು ರೋಗಗಳಿಂದ ದೂರ ಇಡುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಆಹಾರ ತಜ್ಞ ಡಾ. ಖಾದರ್ ಹೇಳಿದರು.

ಮುಳಗುಂದ: ಪ್ರಸ್ತುತ ದಿನಮಾನದಲ್ಲಿ ನಾವು ರೋಗಕ್ಕೆ ಔಷಧಿ ಕಂಡು ಹಿಡಿಯುವುದೇ ಸಾಧನೆ ಎಂದುಕೊಂಡಿದ್ದೇವೆ. ಆದರೆ ರೋಗಗಳನ್ನು ಬರದಂತೆ ನೋಡಿಕೊಳ್ಳುವುದು ನಮ್ಮ ಸಿದ್ಧತೆ ಮತ್ತು ಬದ್ಧತೆ ಆಗಬೇಕಿದೆ. ಹಾಗಾಗಿ ನಮ್ಮ ಪೂರ್ವಜರು ಬಳಸುತ್ತಿದ್ದ ಆಹಾರ ಪದ್ಧತಿ ಅದರಲ್ಲೂ ಮುಖ್ಯವಾಗಿ ಸಿರಿಧಾನ್ಯ ಬಳಕೆಯ ನಮ್ಮನ್ನು ರೋಗಗಳಿಂದ ದೂರ ಇಡುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಆಹಾರ ತಜ್ಞ ಡಾ. ಖಾದರ್ ಹೇಳಿದರು.ಸಮೀಪದ ಕಣವಿ ಗ್ರಾಮದಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆದ ಸಿರಿಧಾನ್ಯ ಮಾತು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಿರಿಧಾನ್ಯ ಸೇರಿದಂತೆ ಹಲವಾರು ಸಸ್ಯಗಳ ಉಪಯೋಗವನ್ನು ಆಹಾರದಲ್ಲಿ ನಾವು ಬಳಕೆ ಮಾಡಿದರೆ ಮಧುಮೇಹ ಸೇರಿದಂತೆ ಹಲವಾರು ಮಾರಕ ರೋಗಗಳಿಂದ ಮುಕ್ತವಾಗಿ ಸ್ವಸ್ಥ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿ, ಸಿರಿಧಾನ್ಯಗಳ ಬಳಕೆ ಮತ್ತು ಅದರ ಉಪಯೋಗದ ಕುರಿತು ವಿವರವಾಗಿ ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಖಾದರ್ ಅವರು ಸಿರಿಧಾನ್ಯದ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿ ಅದರ ಉಪಯೋಗದ ಪ್ರಯೋಗಕ್ಕೆ ತಮ್ಮನ್ನೇ ತೊಡಗಿಸಿ ಯಶಸ್ಸು ಕಂಡು ಮತ್ತೊಬ್ಬರಿಗೆ ಅದರ ಬೆಲೆ ತಿಳಿಸಲು ಶ್ರಮ ಪಡುತ್ತಿದ್ದಾರೆ. ರೋಗಮುಕ್ತ ಸಮಾಜದ ಗುರಿ ಹೊಂದಿದ್ದಾರೆ. ವಿದೇಶಿ ಕಂಪನಿಗಳ ಭಾರಿ ಸಂಬಳದ ಹುದ್ದೆ ತ್ಯಜಿಸಿ ಸಿರಿಧಾನ್ಯದ ಕೃಷಿ ಮಾಡಿರುವುದು ಕಡಿಮೆ ಸಾಧನೆಯಲ್ಲ ಅವರ ಜ್ಞಾನವನ್ನು ರೈತರು ಸಕಾರಾತ್ಮಕವಾಗಿ ಬಳಸಿಕೊಳ್ಳಿ ಎಂದರು.

ಈ ವೇಳೆ ಸಿರಿಧಾನ್ಯ ಬೆಳೆದು ಯಶಸ್ವಿಯಾದ ಗದುಗಿನ ರೈತ ರುದ್ರಯ್ಯ ಎಸ್. ಹಿರೇಮಠ ಮಾತನಾಡಿದರು.ಹರ್ತಿ ಗ್ರಾಪಂ ವತಿಯಿಂದ ಡಾ. ಖಾದರ್ ಅವರನ್ನು ಸನ್ಮಾನಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ಹುಲಕೋಟಿಯ ಕೆವಿಕೆ ಕೃಷಿ ವಿಜ್ಞಾನಿ ಡಾ. ಸುಧಾ, ಪಿಡಿಒ ಶಿವಲೀಲಾ ಸೇರಿದಂತೆ ಹರ್ತಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಸ್ವ ಸಹಾಯ ಸಂಘದ ಮಹಿಳೆಯರು, ರೈತರು, ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.ಗ್ರಾಪಂ ಕಾರ್ಯದರ್ಶಿ ಎಸ್.ಪಿ. ಪ್ರಭಯ್ಯನಮಠ ಸ್ವಾಗತಿಸಿದರು. ಕೃಷಿ ಅಧಿಕಾರಿ ಎಫ್.ಸಿ. ಗುರಿಕಾರ ನಿರೂಪಿಸಿ, ವಂದಿಸಿದರು.