ಸಾರಾಂಶ
ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಧುಮೇಹಿ ಭಕ್ತಾದಿಗಳಿಗೆ ಸಿರಿಧಾನ್ಯಗಳ ಪ್ರಸಾದ ವಿತರಣೆ ಮಾಡುತ್ತಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಧುಮೇಹಿ ಭಕ್ತಾದಿಗಳಿಗೆ ಸಿರಿಧಾನ್ಯಗಳ ಪ್ರಸಾದ ವಿತರಣೆ ಮಾಡುತ್ತಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ತಿಳಿಸಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಅವರಿಗೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿಸಿ ಬೇಳೆ ಬಾತ್, ಉಪ್ಪಿಟ್ಟು, ತರಕಾರಿ ಪಲಾವ್, ಪುಳಿಯೋಗರೆ, ಪೊಂಗಲ್, ಹುಳಿ, ಮಜ್ಜಿಗೆ ಹುಳಿ ಮೊಸರನ್ನ, ಅನ್ನ, ಸಾಂಬಾರ್, ರಸಂ ,ಮಜ್ಜಿಗೆ, ಪಾಯಸ ಪ್ರಸಾದವನ್ನು ವಿತರಣೆ ಮಾಡುತ್ತಿದ್ದೇವೆ.
ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷವಾಗಿ ಮಧುಮೇಹಿ ಭಕ್ತಾದಿಗಳಿಗೆ ಸಿರಿಧಾನ್ಯಗಳಾದ ನವಣೆ, ಸಾಮೆ ಗಳಿಂದ ಅವಲಕ್ಕಿ ಪಾಯಸ, ಬಿಸಿಬೇಳೆ ಬಾತ್ ಪ್ರಸಾದವನ್ನು ಹೊಸದಾಗಿ ಪರಿಚಯ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಇದು ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.ಭಕ್ತಾದಿಗಳಿಗೆ ಪ್ರಸಾದ ಸ್ವೀಕರಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಗುಣಮಟ್ಟದ ತರಕಾರಿ ಆಹಾರ ಪದಾರ್ಥಗಳನ್ನೇ ಬಳಕೆ ಮಾಡಿ ಪ್ರಸಾದ ಸ್ವೀಕರಿಸಬೇಕು. ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸುವ ಭಕ್ತಾದಿಗಳಿಂದ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಯಾವುದಾದರೂ ದೂರುಗಳಿದ್ದರೆ ತಿಳಿಸಲು ಅವರಿಗೆ ಒಂದು ಪುಸ್ತಕ ಇಡುವಂತೆ ಸೂಚನೆ ನೀಡಿದರು.
;Resize=(128,128))
;Resize=(128,128))
;Resize=(128,128))