ಸಾರಾಂಶ
ಐತಿಹಾಸಿಕ ಪಟ್ಟಣದ ಕಿಲ್ಲಾದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕ್ಷೇತ್ರಕ್ಕೆ 50 ವರ್ಷಗಳ ಬಂಗಾರದ ದಿನಗಳ ಸುವರ್ಣ ಮಹೋತ್ಸವ ಜರುಗುತ್ತಿದ್ದು, ಸರ್ವರೂ ಶ್ರೀಕ್ಷೇತ್ರದ ಏಳಿಗೆಗೆ ಶ್ರಮಿಸಬೇಕು ಎಂದು ಕ್ಷೇತ್ರದ ಟ್ರಸ್ಟ್‌ನ ಅಧ್ಯಕ್ಷ ನಾರಾಯಣರಾವ್ ದೇಶಪಾಂಡೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್
ಐತಿಹಾಸಿಕ ಪಟ್ಟಣದ ಕಿಲ್ಲಾದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕ್ಷೇತ್ರಕ್ಕೆ 50 ವರ್ಷಗಳ ಬಂಗಾರದ ದಿನಗಳ ಸುವರ್ಣ ಮಹೋತ್ಸವ ಜರುಗುತ್ತಿದ್ದು, ಸರ್ವರೂ ಶ್ರೀಕ್ಷೇತ್ರದ ಏಳಿಗೆಗೆ ಶ್ರಮಿಸಬೇಕು ಎಂದು ಕ್ಷೇತ್ರದ ಟ್ರಸ್ಟ್‌ನ ಅಧ್ಯಕ್ಷ ನಾರಾಯಣರಾವ್ ದೇಶಪಾಂಡೆ ತಿಳಿಸಿದರು.ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಪುನರ್ ಪ್ರತಿಷ್ಠಾಪನೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ವೇದೋಪನಿಷತ್ ಗಳನ್ನು ಪಠಣ ಮಾಡುವುದರ ಮೂಲಕ ಉದ್ಘಾಟಿಸಿ, ಬಂಗಾರದ ದಿನಗಳ ಬೆಳ್ಳಿಹಬ್ಬಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಇಲ್ಲಿನ ಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಟ್ರಸ್ಟ್ ಸದಸ್ಯ ನರಸಿಂಗರಾವ್ ದೇಶಪಾಂಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ರಚಿಸಿದ ಹೊನ್ನ ಹೊತ್ತಿಗೆ ಎಂಬ ಕೃತಿಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ನಂತರ ಬೆಂಗಳೂರಿನ ವಿದ್ವಾನ್ ವಿಜಯ ಸಿಂಹಾಚಾರ್ಯ ಅವರಿಂದ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಜರುಗಿತು. ಡಾ.ಮಂಜುನಾಥ ಹಾಗೂ ವಿ.ರಮೇಶ ಅವರಿಂದ ವೇದೋಪನಿಷತ್‌ಗಳನ್ನು ಪಠಣ ಮಾಡಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಗರವ್ ದೇಶಪಾಂಡೆ, ಡಾ.ಗುರುರಾಜ ದೇಶಪಾಂಡೆ, ಅನಂತ ದೇಶಪಾಂಡೆ, ಶ್ರೀನಿವಾಸ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ಅನಂತರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ್, ಗುರುರಾಜ ದೇಶಪಾಂಡೆ, ಮಠದ ಅರ್ಚಕರಾದ ಮಧ್ವಾಚಾರ್ಯ ಜೋಷಿ, ಹೇಮಂತ ಜೋಷಿ, ಬಂಗಾಲಿ ಹರ್ಷ, ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.