2983 ಡ್ರೋನ್ ಬಳಸಿ ಹುಲಿಯ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ‌ನಿರ್ಮಿಸಿದ ಸೆಸ್ಕ್

| Published : Sep 29 2025, 01:02 AM IST

ಸಾರಾಂಶ

ನಗರದ ಬನ್ನಿಮಂಟಪ ಮಂಜಿನ ಕವಾಯತು ಮೈದಾನದಲ್ಲಿ ದಸರಾ ಮಹೋತ್ಸವಕ್ಕೆ ಅತ್ಯಾಕರ್ಷಕ ಡ್ರೋನ್ ಪ್ರದರ್ಶನವು ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿತು. ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿದ 3000 ಡ್ರೋನ್ ಗಳು ಹೊಸ ಲೋಕವನ್ನು ಸೃಷ್ಟಿಸಿತು. ಇದರೊಂದಿಗೆ 2983 ಡ್ರೋನ್ ಗಳನ್ನು ಬಳಸಿ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ‌ನಿರ್ಮಿಸುವ ಮೂಲಕ ಸೆಸ್ಕ್ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ಬಾನಂಗಳದಲ್ಲಿ 2983 ಡ್ರೋನ್ ಬಳಸಿ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ರಚಿಸುವ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು (ಸೆಸ್ಕ್) ಗಿನ್ನಿಸ್ ದಾಖಲೆ ‌ನಿರ್ಮಿಸಿತು.

ನಗರದ ಬನ್ನಿಮಂಟಪ ಮಂಜಿನ ಕವಾಯತು ಮೈದಾನದಲ್ಲಿ ದಸರಾ ಮಹೋತ್ಸವಕ್ಕೆ ಅತ್ಯಾಕರ್ಷಕ ಡ್ರೋನ್ ಪ್ರದರ್ಶನವು ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿತು. ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿದ 3000 ಡ್ರೋನ್ ಗಳು ಹೊಸ ಲೋಕವನ್ನು ಸೃಷ್ಟಿಸಿತು. ಇದರೊಂದಿಗೆ 2983 ಡ್ರೋನ್ ಗಳನ್ನು ಬಳಸಿ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ‌ನಿರ್ಮಿಸುವ ಮೂಲಕ ಸೆಸ್ಕ್ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿತು.

ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣ

ಸೆಸ್ಕ್ ವತಿಯಿಂದ ನಡೆಸಲಾದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನದಲ್ಲಿ ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣಗೊಂಡಿತು. ಈ ಬಾರಿಯ ಡ್ರೋನ್ ಪ್ರದರ್ಶನದಲ್ಲಿ ಒಟ್ಟು 2983 ಡ್ರೋನ್ ಗಳನ್ನು ಬಳಸಿಕೊಂಡು ಬಾನಂಗಳದಲ್ಲಿ ಬೃಹದಾಕಾರದ ಪ್ರಾಣಿ (ಹುಲಿ) ಕಲಾಕೃತಿಯನ್ನು ನಿರ್ಮಾಣ ಮಾಡುವ ಮೂಲಕ ಹೊಸದಾಗಿ ಗಿನ್ನಿಸ್ ವಿಶ್ವ ದಾಖಲೆ‌ ನಿರ್ಮಾಣ ಮಾಡಲಾಯಿತು. ಈ ಮೊದಲು 1985 ಡ್ರೋನ್ ಗಳನ್ನು ಬಳಸಿಕೊಂಡು ಹುಲಿಯ ಕಲಾಕೃತಿ ರಚಿಸುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು.