ಚದುರಂಗ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಪಟುಗಳ ಮಾನಸಿಕತೆ, ಏಕಾಗ್ರತೆ ಹಾಗೂ ಚಿಂತನ ಶೀಲತೆ ಹೆಚ್ಚಾಗುತ್ತದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಚದುರಂಗ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಪಟುಗಳ ಮಾನಸಿಕತೆ, ಏಕಾಗ್ರತೆ ಹಾಗೂ ಚಿಂತನ ಶೀಲತೆ ಹೆಚ್ಚಾಗುತ್ತದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ ಕುಮಾರ್ ಹೇಳಿದರು.

ಸುಂಟಿಕೊಪ್ಪದ ಕೂರ್ಗ್ ಚೆಸ್ ಕ್ಲಬ್ ಇವರ ವತಿಯಿಂದ ಶ್ರೀ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಟ್ಟದ ಚದುರಂಗ (ಚೆಸ್) ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಚದುರಂಗ ಕ್ರೀಡೆಗೆ ವಯೋಮಾನದ ಮಿತಿ ಇಲ್ಲ. ಹಿರಿಯರು ಕಿರಿಯರು ಎನ್ನದೆ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ. ಈ ಕ್ರೀಡೆಯಲ್ಲಿ ಮಾನವರ ಬುದ್ಧಿ ಮಟ್ಟವನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಚಿಂತನ ಶೀಲತೆ ಹೆಚ್ಚಾಗುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಈ ಕ್ರೀಡೆಯು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. 7ರಿಂದ 14 ವರ್ಷ ಪ್ರಾಯದ ಮಕ್ಕಳ ವಿಭಾಗದಲ್ಲಿ 42 ಮಂದಿ ಪಾಲ್ಗೊಂಡಿದ್ದು, ರೋಶನ್ ಆರ್ ನಾಯಕ್ ಪ್ರಥಮ ಬಹುಮಾನ ರು. 3000 , ಭೂಷಣ್ ಎಂ.ಆರ್.ದ್ವಿತೀಯ ಬಹುಮಾನ ರು. 2000 , ಮಿಲಿದ್ ನಾರಾಯಣ ತೃತೀಯ ಬಹುಮಾನ ರು. 1000 ನಗದು ಬಹುಮಾನ ಹಾಗೂ ಐವರು ಸ್ಪರ್ಧೆಗಳಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು.15 ವರ್ಷ ಮೇಲ್ಪಟ್ಟವರ ವಿಭಾಗದ 18 ಸ್ಪರ್ಧಿಗಳು ಪಾಲ್ಗೊಂಡಿದ್ದು, ಪಿ.ಶ್ರೀನಿವಾಸ್ ಪ್ರಥಮ ಬಹುಮಾನ ನಗದು ರು. 5000, ರಂಜಿತ್ ಗುರುರಾಜ್ ದ್ವಿತೀಯ ಬಹುಮಾನ ರು. 3000 , ಎಸ್. ಅಣ್ಣಯ್ಯ ತೃತೀಯ ಬಹುಮಾನ ರು. 1500 ನಗದು ಬಹುಮಾನ ನೀಡಲಾಯಿತು. ಸಮಾಧಾನಕರ ಐವರು ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.