ಸಾರಾಂಶ
ದಾವಣಗೆರೆ: ಸರ ಕಳವು ಮಾಡಿದ್ದ ಮೂವರ ಪೈಕಿ ಓರ್ವನನ್ನು ಬಂಧಿಸಿ, ₹2 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ₹80 ಸಾವಿರ ಮೌಲ್ಯದ ಹೊಂಡಾ ಶೈನ್ ಬೈಕ್ ಸೇರಿದಂತೆ ₹2.80 ಲಕ್ಷ ಮೌಲ್ಯದ ಸ್ವತ್ತನ್ನು ತಾಲೂಕಿನ ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ ರಾಮನಗರದ ವಾಸಿ, ಆಟೋ ಚಾಲಕ ರವಿಕಿರಣ (27) ಬಂಧಿತ ಆರೋಪಿ. ವಡೇರಹಳ್ಳಿ ಯ ಸುಮಂಗಳಮ್ಮ ನಂದ್ಯಪ್ಪ (62) ಮಾ.12ರಂದು ಬೆಳಗ್ಗೆ 6.30ರ ವಾಕಿಂಗ್ ಹೋಗುವಾಗ ಕೊರಳಲ್ಲಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸಿದ್ದರು. ಈ ಬಗ್ಗೆ ಮಾಯಕೊಂಡ ಠಾಣೆಯಲ್ಲಿ ದೂರು ದಾಖಲಾಗಿತ್ತು.ರವಿಕಿರಣನ ಸಹಚರರಾದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ಕೂಲಿ ಕೆಲಸಗಾರ ರಮೇಶ (47) ಹಾಗೂ ಹಮಾಲಿ ಕೆಲಸಗಾರ ಮನು ಅಲಿಯಾಸ್ ಮನೋಜ (23) ನಾಪತ್ತೆಯಾಗಿದ್ದು, ಇಬ್ಬರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.