ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ನಾರ್ಥ್ ಕರ್ನಾಟಕ ಅಚೀವರ್ಸ್ ಅವಾರ್ಡ್ ಪಡೆದಿರುವ ಡಾ.ಮಲ್ಲಮ್ಮ ಯಾಳವಾರ ಅಧ್ಯಕ್ಷತೆಯಲ್ಲಿರುವ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ 9ನೇ ಶಾಖೆಯನ್ನು ಇತ್ತೀಚೆಗೆ ಬಸವನಬಾಗೇವಾಡಿ ಪಟ್ಟಣದಲ್ಲಿ ಉದ್ಘಾಟಿಸಲಾಯಿತು.ಬಸವನ ಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ ಶಾಖೆ ಉದ್ಘಾಟಿಸಿದರು. ಮುಖ್ಯ ಅತಿಥಿ ಲೋಕನಾಥ ಅಗರವಾಲ್, ಅತಿಥಿಗಳಾಗಿ ಗುರಣ್ಣ ಬಾಗೇವಾಡಿ, ಈರಣ್ಣ ಕುಚನೂರ, ಮಂಜುನಾಥ ಹೊಸಗೌಡರ, ಸಿದ್ರಾಮಪ್ಪ ಕಿಣಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕಿ ಮಂಜುಳಾ ಟಕ್ಕಳಕಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗೀತಾ ಬಿರಾದಾರ (ಪಾಟೀಲ), ರಮಾಬೆನ್ ದರಬಾರ, ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮೀ ಬಳಗೊಂಡ, ವ್ಯವಸ್ಥಾಪಕಿ ಮೈತ್ರಾ ಬಾಗೇವಾಡಿ(ಪಾಟೀಲ), ಶಾಖಾ ವ್ಯವಸ್ಥಾಪಕಿ ವಿಶಾಲಾಕ್ಷಿ ಚೌಧರಿ, ಆಡಳಿತ ಮಂಡಳಿ ಸದಸ್ಯರು, ಸದಸ್ಯರು, ಸಿಬ್ಬಂದಿ ಸೇರಿದಂತೆ ನೂರಕ್ಕೂ ಅಧಿಕ ಗ್ರಾಹಕರು, ಸಾರ್ವಜನಿಕರು ಭಾಗವಹಿಸಿದ್ದರು.ಜನತೆಯ ಬೆಂಬಲ, ಗ್ರಾಹಕರ ಸಹಕಾರದೊಂದಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಚೈತನ್ಯ ಮಹಿಳಾ ಬ್ಯಾಂಕ್ ಇದೀಗ 9ನೇ ಶಾಖೆಯನ್ನು ತೆರೆದಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿರಂತರ ಪ್ರಯತ್ನ ಮತ್ತು ಸದುದ್ದೇಶವೇ ಬ್ಯಾಂಕಿನ ಪ್ರಗತಿಗೆ ಕಾರಣವಾಗಿದೆ.
-ಡಾ.ಮಲ್ಲಮ್ಮ ಯಾಳವಾರ, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ.