ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರ ವಾರ್ತೆ ಕಲಬುರಗಿಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮೀ ಚಕ್ರವರ್ತಿ ಸೂಲಿಬೆಲಿ ಚಿತ್ತಾಪುರ ಸೇರಿದಂತೆ ಕಲಬುರಗಿಯ ಯಾವ ತಾಲೂಕುಗಳಲ್ಲಿಯೂ ಸುಳಿಯದಂತೆ ಜಿಲ್ಲಾಡಳಿತ ಫೆ.28ರ ರಾತ್ರಿ ತರಾತುರಿಯಲ್ಲಿ ಹೊರಡಿಸಿದ್ದ ಆದೇಶವನ್ನು ಇಲ್ಲಿನ ಹೈಕೋರ್ಟ್ ಹೊಡೆದು ಹಾಕಿದ್ದಲ್ಲದೆ, ಸೂಲಿಬೇಲಿ ಇವರ ಚಿತ್ತಾಪುರ ಸಮಾರಂಭಕ್ಕೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ನೀಡಿದ ತೀರ್ಪು ಜಿಲ್ಲಾಡಳಿತದ ನಡೆಯನ್ನೇ ಸಾರ್ವಜನಿಕರು ಶಂಕೆಯಿಂದ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಪರಾಮರ್ಶೆ ಮಾಡುವಂತೆ ಮಾಡಿದೆ.
ಆತುರದಲ್ಲಿ ಹೊರಡಿಸಿದ ಆದೇಶದಲ್ಲಿ ಜಿಲ್ಲಾಡಳಿತ ತಾನೇ ಸಿಲುಕಿ ಫಜೀತಿ ಪಟ್ಟಿದ್ದಲ್ಲದೆ, ಯಾರನ್ನು ನಿರ್ಬಂಧಿಸಲು ಜಿಲ್ಲಾಡಳಿತ ಹೊರಟಿತ್ತೋ ಅದಂತೂ ಕೈಗೂಡದೆ, ಅವರ ಉಪನ್ಯಾಸ ಸಮಾರಂಭಕ್ಕೇ ಬಿಗಿ ಬಂದೋಬಸ್ತ್ ನೀಡುವಂತಾಯ್ತು, ರಾಜಕೀಯವಾಗಿ ಕಾಣದ ಕೈಗಳಲ್ಲಿ ಬೊಂಬೆ ನಾವೆಂದು ಜಿಲ್ಲಾಡಳಿತವೇ ಸಾರಿ ಸುದ್ದಿಗೆ ಗ್ರಾಸವಾಯ್ತೆಂದು ಜನರೇ ಆಡಿಕೊಳ್ಳುತ್ತಿದ್ದಾರೆ.ನಮೋ ಬ್ರಿಗೇಡ್ ಸಮಾರಂಭದಲ್ಲಿ ಚಿಕ್ಕಮಗಳೂರು, ರಾಯಚೂರಲ್ಲಿ ಚಕ್ರವರ್ತಿ ಸೂಲಿಬೇಲಿಯವರು ಖರ್ಗೆ ಕುರಿತಂತೆ ಆಡಿದ ಮಾತುಗಳು ಸುದ್ದಿಯಾಗಿದ್ದಲ್ಲದೆ ವಿವಾದಕ್ಕೂ ಕಾರಣವಾಗಿದ್ದು ಗುಟ್ಟೇನಲ್ಲ. ಅವರ ಮೇಲೆ ಪ್ರಕರಣ ಕೂಡ ದಾಖಲಿಸು ವ ಪ್ರಯತ್ನಗಳಾದವು. ಇವೆಲ್ಲದರ ನಡುವೆಯೇ ಚಿತ್ತಾಪುರಕ್ಕೆ ಬನ್ನಿರೆಂದು ನಮೋ ಬ್ರಿಗೇಡ್ ಬುಲಾವ್ ನೀಡಿದ್ದರಿಂದ ಅಲ್ಲಿಗೆ ಹೊರಟುನಿಂತ ಸೂಲಿಬೆಲೆಯವರ ಈ ಭೇಟಿ ತಪ್ಪಿಸಲೇಬೇಕು ಎಂಬ ಸಂಕಲ್ಪ ತೊಟ್ಟಂತಿದ್ದ ಪೊಲೀಸ್, ಜಿಲ್ಲಾಡಳಿತ ಆತುರಾತುರವಾಗಿ ಫೆ. 28 ರಂದು ಆದೇಶ ಹೊರಡಿಸಿತ್ತು.
ಈ ಆದೇಶದ ಪ್ರತಿ ಕನ್ನಡಪ್ರಭ ಬಳಿ ಲಭ್ಯವಿದೆ, ಈ ಆದೇಶ ಓದಿದರೆ ಸೂಲಿಬೆಲೆ ಅವರ ಕುರಿತಂತೆ ಅನೇಕ ಪ್ರಕರಣಗಳು ದಾಖಲಾಗಿವೆ, ಆಕ್ಷೇಪಾರ್ಹ ಮಾತನ್ನಾಡುತತಾರೆ, ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನ್ನಾಡುತ್ತಾರೆ, ಇವೆಲ್ಲದರಿಂದ ಶಾಂತಿಗೆ ಬರಬಹುದು ಎಂದು ಅವರ ಕಲಬುರಗಿ ಪ್ರವೇಶವನ್ನೇ ಫೆ.28ರಿಂದ ಮಾ.4ರ ವರೆಗೆ ನಿರ್ಬಂಧಿಸಲಾಗುತ್ತಿದೆ ಎಂದು ಜಿಲ್ಲಾಡಳಿತವೇ ಹೇಳಿತ್ತು.ತನ್ನ ಆದೇಶ ಜಾರಿಗೆ ತರಲು ಫೆ.28ರ ಮಧ್ಯರಾತ್ರಿ ಬೀದರ್, ಕಲಬುರಗಿ ಗಡಿಯಲ್ಲಿ ಭಾರಿ ಪೊಲೀಸ್ ಬಲ ನಿಯೋಜಿಸಿ ಚಕ್ರವರ್ತಿ ಕಲಬುರಗಿ ಪ್ರವೇಶ ತಡೆಯಲಾಯ್ತಲ್ಲದೆ ಅವರನ್ನು ವಶಕ್ಕೂ ಪಡೆಯಲಾಗಿತ್ತು. ತಮ್ಮ ವಿರುದ್ಧದ ಜಿಲ್ಲಾಡಳಿತದ ಈ ಕ್ರಮಕ್ಕೆ ಸಿಡಿದೆದ್ದ ಚಕ್ರವರ್ತಿ ಇದನ್ನು ಹೈಕೋರ್ಟ್ ಕಲಬುರಗಿಯಲ್ಲಿ ದಾವೆ ಹೂಡಿ ಪ್ರಶ್ನಿಸಿದ್ದಲ್ಲದೆ ನಿರ್ಬಂಧ ತೆರವಿಗೂ ಕೋರಿದ್ದರು.
ತಕ್ಷಣ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಜಿಲ್ಲಾಡಳಿತದ ಆದೇಶದಲ್ಲಿ ಸೂಲಿಬೆಲೆ ಕಲಬುರಗಿ ಭೇಟಿ ನಿರ್ಬಂಧಿಸಿರುವ ಜಿಲ್ಲಾಡಳಿತ ಅದಕ್ಕೆ ಸೂಕ್ತ ಕಾರಣ ನೀಡುವಲ ಗೋಜಿಗೆ ಹೋಗಿಲ್ಲ, ಸಾಮಾನ್ಯ ಕಾರಣಗಳನ್ನೇ ನೀಡುತ್ತ ಭೇಟಿ ನಿರ್ಬಂಧಿಸಿದೆ ಎಂಬರ್ಥದಲ್ಲಿ ಅಭಿಪ್ರಾಯಪಟ್ಟಿದ್ದಲ್ಲದೆ ಆದೇಶವನ್ನು ತೆವು ಮಾಡಿ ಕಲಬುರಗಿ, ಚಿತ್ತಾಪುರ ಭೇಟಿಗೆಲ್ಲದಕ್ಕೂ ಅವಶ ಕಲ್ಪಿಸಿದ್ದಲ್ಲದೆ ಬಿಗಿ ಬಂದೋಬಸ್ತ್ಗೂ ಸೂಚಿಸಿತ್ತು. ಹೈಕೋರ್ಟ್‌ನ ಈ ಮಹತ್ವದ ಆದೇಶದಿಂದಾಗಿ ಜಿಲ್ಲಾಡಳಿತ ಮುಖಭಂಗಕ್ಕೊಳಗಾಯ್ತು ಎಂದೇ ಎಲ್ಲೆಡೆ ಅಭಿಪ್ರಾಯಗು ವ್ಯಕ್ತವಾಗುತ್ತಿವೆ.ಜಿಲ್ಲಾಡಳಿತದ ಈ ನಡೆಯನ್ನು ಜನತೆ ರಾಜಕೀಯ ಪ್ರೇರಿತ ನಡೆ ಎಂದೂ, ಕಾಣದ ಕೈಗಳ ಕೈಗೊಂಬೆ ರೀತಿಯಲ್ಲಿ ಪೊಲೀಸರು, ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ ಎಂಬುದಾಗಿಯೂ ತೀವ್ರ ಟೀಕೆಗೆ ಗುರಿಯಾಗಿದೆ.
ಚಕ್ರವರ್ತಿ ಸೂಲಿಬೆಲೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ವಾಕ್ಸಮರ, ಹೇಳಿಕೆ, ಟ್ವೀಟರ್ ವಾರ್ ಅದ್ಯಾವ ಕಾರಣಕ್ಕಾಗಿ ಇದೆಯೋ ಎಂಬುದನ್ನು ಇಲ್ಲಿ ವಿಶ್ಲೇಷಣೆ ಮಾಡೋದಕ್ಕಿಂತ ಚಿತ್ತಾಪುರ ಸಭೆಗೆ ಅರು ಬಂದು ಹೋಗಿದ್ದರೆ ಎಂದಿನಂತೆ ಅದು ಅಲ್ಲಿಗೆ ಮುಗಿದು ಹೋಗುತ್ತಿತ್ತು. ಅವರಿಗೆ ಕಲಬುರಗಿಗೆ ಕಾಲಿಡಲೂ ಬಿಡೋದಿಲ್ಲವಂಬ ರೀತಿಯಲ್ಲಿ ಈ ಬೆಳವಣಿಗೆ ನಡೆದದ್ದು ಜನರ ಗಮನ ಹೆಚ್ಚಿಗೆ ಸೆಳೆಯುವಂತೆ ಮಾಡಿದೆ. ಚಿತ್ತಾಪೂರದಲ್ಲಿ ಸೂಲಿಬೆಲೆ ಮಾತು ಆಲಿಸಲು ಅಂದು ಸೇರಿದ್ದ ಜನಸಂಖ್ಯೆಯೇ ಈ ಮಾತಿಗೆ ಕನ್ನಡಿಯೂ ಹಿಡಿದಿತ್ತು.ಜಿಲ್ಲಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಬೇಕದ್ದು ಜಿಲ್ಲಾಡಳಿತ ಮೊದಲ ಕರ್ತವ್ಯವಾದರೂ ಇಂಚಹ ಸೂಕ್ಷ್ಮ ಸಂದರ್ಭಳಲ್ಲಿ ಆಡಳಿತ ಯಾರ ಮಾತನ್ನೂ ಆಲಿಸದೆ ತಾನೆ ಸಮಯ- ಸಂದರ್ಭಗಳ ಅವಲೋಕನ ಮಾಡಿಕೊಂಡು ಜನರ ಹಿತಾಸಕ್ತಿ ಕಾಪಡುವಂತಹ ನಡೆಗಳೊಂದಿಗೆ ಮುಂದಡಿ ಇಟ್ಟಿದ್ದರೆ ಚೆಂದಾಗಿರುತ್ತಿತ್ತು. ಅದೆಲ್ಲ ಬಿಟ್ಟು ಆತುರದಲ್ಲಿ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದು ಸಾರ್ವಜನಿಕವಾಗಿ ಎಲ್ಲರ ಗಮನಕ್ಕೂ ಬರುವಂತಾಯ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಿಯಾಂಕ್- ಸೂಲಿಬೆಲೆ ನಡುವೆ ಹೇಳಿಕೆ ಸಮರ: ಕಲಬುರಗಿ ಗಡಿ ಪ್ರವೇಶವನ್ನು ನಿರ್ಬಂಧಿಸಿ ಪೊಲೀಸರು ಕೈಗೊಂಡ ಕ್ರಮಗಳು, ನಂತರದಲ್ಲಿ ಹೈಕೋರ್ಟ್ ಅದನ್ನು ತೆರವು ಮಾಡಿದ ಬೆಳವಣಿಗೆಗಳನ್ನೆಲ್ಲ ಇಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಮಾತಿನ ಸಮರ ಸಾಗಿದೆ. ಇವರಿಬ್ಬರೂ ತಮ್ಮ ಎಕ್ಸ್ ಖಾತೆಯಲ್ಲಿ ಪರಸ್ಪರ ಹೇಳಿಕೆ ನೀಡುತ್ತ ಗಮನ ಸೆಳೆಯುತ್ತಿದ್ದಾರೆ.ಸಚಿವ ಪ್ರಿಯಾಂಕ್ ಖರ್ಗೆ ಒಬ್ಬ ಫೈಟರ್, ಆದರೆ ಆದರೆ ಅವರು ನಿಜವಾದ ಹಿಟ್ ಆ್ಯಂಡ್ ರನ್ ಮಾಸ್ಟರ್ ಅಂತ ನಾನು ಭಾವಿಸಿದ್ದೇನೆ, ಕೂಟದ ಮುಂದೆ ಮತನಾಡುವುದು ಸುಲಭ, ,ಮೂಹವನ್ನು ಎದುರಿಸುವುದು ಕಷ್ಟ ಎಂದು ಸೂಲಿಬೆಲೆ ಎಕ್ಸ್ ಖಾತೆಯಲ್ಲಿ ಸಂದೇಶ ಹಾಕಿ ತಿವಿದಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಖಾತೆಯಲ್ಲಿ, ತಿರುಗೇಟು ನೀಡಿದ್ದಾರೆ. ತಪ್ಪು ಮಾಹಿತಿಯ ಮಾಸ್ಟರ್ ಚಕ್ರವರ್ತಿ ಸೂಲಿಬೆಲೆ, ನಿಮ್ಮ ನಿಷ್ಪ್ರಯೋಜಕ ವಳಾಪಟ್ಟಿಗಿಂತ ಪ್ರಮುಖವಾದ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸುತ್ತೇನೆ. ಬಾಡಿಗೆ ಭಾಷಣಕಾರ ನೀವು, ವೇದಿಕೆ ಪ್ರದರ್ಶನಕ್ಕೆ ಎಷ್ಟು ಹಣ ಪಡೆಯು್ೀರಿ? ಪ್ರತಿ ಸುಳ್ಳಿನ ಲೆಕ್ಕ ಎಷ್ಟು? ಪ್ರಧಾನಿ ದೊಡ್ಡ ಅಭಿಮಾನಿಯಾಗಲು ಹಣ ಪಡೆಯುತ್ತೀರಿ ಎಂಬುು ಭಕ್ತರಿಗೆ ತಿಳಿದಿದೆಯ ಎಂದು ಕಿಚಾಯಿಸಿದ್ದಾರೆ.ಉಪ ವಿಭಾಧಿಕಾರಿ ಕೌರ್ ಆದೇಶದಲ್ಲಿ ಏನಿತ್ತು?: ಸೂಲಿಬೇಲಿಯವರು ಫೆ.29ರಂದು ಚಿತ್ತಾಪುರ ನಗರದ ಬಾಪುರಾವ್ ಪಾಟೀಲ್ ಕಲ್ಯಾಣ್ ಮಂಟಪದಲ್ಲಿ ಅಯೋಜಿಸಿರುವ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಕಲ್ಬುರ್ಗಿಗೆ ಬರುತ್ತಿದ್ದಾರೆ, ಇವರ ಮಾತುಗಳಿಂದ ಶಾಂತಿಗೆ ಭಂಗ ಬರಬಹುದು, ಇವರ ಕಲಬುರಗಿ ಪ್ರವೇಶ ನಿಷೇಧಿಸಿರಿ ಎಂದು ಜಿಲ್ಲಾ ಎಸ್ಪಿಯವರು ನೀಡಿದ ಪತ್ರದ ಹಿನ್ನೆಲೆಯಲ್ಲಿ ಮಾ.4ರ ವರೆಗೂ ಸೂಲಿಬೇಲಿಯವರ ಕಲಬುರಗಿ ಜಿಲ್ಲೆ ಪ್ರವೇಶದ ಮೇಲೆ ನಿರ್ಬಂಧ ಹೇರಿ ಕಲಬುರಗಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಫೆ.28ಕ್ಕೆ ಆದೇಶ ಹೊರಡಿಸಿದ್ದರು. ಹಿಂದೆಲ್ಲಾ ನಮೋ ಬ್ರಿಗೇಡ್ ಸಮಾರಂಭಗಳಲ್ಲಿ ಆಕ್ಷೇಪಾರ್ಹ, ಅಸಂಸದೀಯ ಪದಗಳನ್ನೆಲ್ಲ ಬಳಸಿ ಸೂಲಿಬೆಲೆ ಮಾತನಾಡಿದ್ದಿದೆ, ಅನೇಕ ಕಡೆ ಪ್ರಕರಣ ದಾಖಲಾಗಿರೋದು ಇದೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸೋದು, ಸಾಮಾಜಿಕ ಜಾಲ ತಾಣಗಳಲ್ಲಿ ಅಸಂಸದೀಯ ಪದಗಳನ್ನು ಬಳಸಿರೋದು ಕೂಡಾ ಇದೆ.
ಒಂದು ಕೋಮಿನ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡುವ ಮನೋಭಾವನೆಯವರಾಗಿದ್ದಾರೆ. ಮಹಿಳೆಯರ ಬಗ್ಗೆಯೂ ಆಕ್ಷೇಪಾರ್ಹ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಹೀಗಾಗಿ ಇವರ ಕಲಬುರಗಿ ಪ್ರವೇಶ ನಿರ್ಬಂಧಿಸಬೇಕಎಂದು ಎಸ್ಪಿಯವರ ಪತ್ರವನ್ನು ಪರಿಶೀಲಿಸಿ ಐಪಿಸಿ ಕಲಂ 133, 143, 144, 144 (ಎ) ಅನುಸಾರವಾಗಿ ಚಕ್ರವರ್ತಿ ಕಲಬುರಗಿ ಪ್ರವೇಶವನ್ನು ನಿರ್ಬಂಧಿಸಿದ್ದಾಗಿ ಎಸಿ ಕೌರ್ ತಮ್ಮ ಆದೇಶದಲ್ಲಿ ಹೇಳಿದ್ದರು.