ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದ ಲೋಕೋಪಯೋಗಿ ವಿಶ್ರಾಂತಿ ಮಂದಿರಕ್ಕೆ ಗುರುವಾರ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಭೇಟಿ ನೀಡಿ ತಾಲೂಕಿನಲ್ಲಿ ಸಂಘಟನೆಯ ಬಲವರ್ಧನೆ, ಜಾತಿ ಒಳ ಮೀಸಲಾತಿ ಸಮೀಕ್ಷೆ ಹಾಗೂ ಇತರೆ ವಿಷಯಗಳ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದರು.ಛಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಈಶ್ವರ ಮಾದಾರ ಮಾತನಾಡಿ, ಸದ್ಯ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಛಲವಾದಿ ಸಮುದಾಯದ ಎಲ್ಲ ಬಂಧುಗಳು ಸಕ್ರಿಯರಾಗಿ ಭಾಗವಹಿಸಬೇಕು ಮತ್ತು ಸಮುದಾಯದ ಬಾಂಧವರು ಜಾತಿ ಕಾಲಂನಲ್ಲಿ ಛಲವಾದಿ ಎಂದು ನಮೂದಿಸಬೇಕು ಎಂದು ಈಗಾಗಲೇ ತಾಲೂಕಿನ ಪರಿಶಿಷ್ಟ ಸಮುದಾತದ ಛಲವಾದಿ ಬಾಂಧವರಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಮಹಾಂತೇಶ ಪಾತ್ರಧಾರ, ಪ್ರಕಾಶ ಮಾದಾರ, ಪಟ್ಟು ಹಾವನೂರ, ರಾಮಚಂದ್ರ ಮಾದಾರ, ಕಲ್ಲಪ್ಪ ಕೋಲಕಾರ, ಶಿಡ್ಲಪ್ಪ ಕೋಲಕಾರ ಸೇರಿದಂತೆ ಛಲವಾದಿ ಮಹಾಸಭಾ ಮುಖಂಡರು, ಕಾರ್ಯಕರ್ತರು ಇದ್ದರು.ಬೆಳಗಾವಿ ಜಿಲ್ಲೆಯಲ್ಲಿ ಛಲವಾದಿ ಮತ್ತು ಹರಿಜನ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಛಲವಾದಿ ಮಹಾಸಭಾ ಪದಾಧಿಕಾರಿಗಳು ತಾಲೂಕು ಪ್ರವಾಸ ಕೈಗೊಂಡು ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು. ತಾಲೂಕಿನ ಪರಿಶಿಷ್ಟ ಕಾಲನಿಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಬಗೆಹರಿಸಬೇಕು. ಪರಿಶಿಷ್ಟ ಸಮುದಾಯದ ಪ್ರತಿಯೊಬ್ಬರು ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಗಮನಹರಿಸಬೇಕು.
-ಮಲ್ಲಿಕಾರ್ಜುನ ರಾಶಿಂಗೆ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರು.;Resize=(128,128))
;Resize=(128,128))
;Resize=(128,128))
;Resize=(128,128))