ಛಲವಾದಿ ಮಹಾಸಭೆ ಕಾಂಗ್ರೆಸ್‌ಗೆ ಬೆಂಬಲ

| Published : Apr 21 2024, 02:25 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಕೆ.ಶಿವರಾಂ ಅವರನ್ನು 10 ವರ್ಷಗಳಿಗೂ ಹೆಚ್ಚು ಕಾಲ ದುಡಿಸಿಕೊಂಡು ಕೊನೆ ಕ್ಷಣದಲ್ಲಿ ಅವರ ಪತ್ನಿಗೂ ದ್ರೋಹ ಎಸಗಿದ ಹಿನ್ನೆಲೆ ಛಲವಾದಿ ಮಹಾಸಭೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದೆ. ಛಲವಾದಿ ಮಹಾಸಭೆ ಪದಾಧಿಕಾರಿಗಳು, ಸದಸ್ಯರು ಹಾಗೂ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ಕಾಂಗ್ರೆಸ್ ಬೆಂಬಲಿಸಬೇಕು. ಅಭ್ಯರ್ಥಿ ಸುನೀಲ್ ಬೋಸ್ ಗೆಲುವಿಗೆ ಸ್ಪಂದಿಸಬೇಕು ಎಂದು ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷರಾದ ಅಣಗಳ್ಳಿ ಬಸವರಾಜು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಲೋಕಸಭಾ ಚುನಾವಣೆಯಲ್ಲಿ ಕೆ.ಶಿವರಾಂ ಅವರನ್ನು 10 ವರ್ಷಗಳಿಗೂ ಹೆಚ್ಚು ಕಾಲ ದುಡಿಸಿಕೊಂಡು ಕೊನೆ ಕ್ಷಣದಲ್ಲಿ ಅವರ ಪತ್ನಿಗೂ ದ್ರೋಹ ಎಸಗಿದ ಹಿನ್ನೆಲೆ ಛಲವಾದಿ ಮಹಾಸಭೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದೆ. ಛಲವಾದಿ ಮಹಾಸಭೆ ಪದಾಧಿಕಾರಿಗಳು, ಸದಸ್ಯರು ಹಾಗೂ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ಕಾಂಗ್ರೆಸ್ ಬೆಂಬಲಿಸಬೇಕು. ಅಭ್ಯರ್ಥಿ ಸುನೀಲ್ ಬೋಸ್ ಗೆಲುವಿಗೆ ಸ್ಪಂದಿಸಬೇಕು ಎಂದು ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷರಾದ ಅಣಗಳ್ಳಿ ಬಸವರಾಜು ಹೇಳಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಸಭಾ ಚುನಾವಣೆಗೂ ಮುನ್ನ ಛಲವಾದಿ ಮಹಾಸಭೆ ರಾಜ್ಯಾಧ್ಯಕ್ಷ ಕೆ.ಶಿವರಾಂ ಅವರು ಅಕಾಲಿಕ ಮರಣ ಹೊಂದಿದರು. ಅವರ ನಿಧನದ ನಂತರವೂ ಬಿಜೆಪಿ ಸಂತಾಪ ಸೂಚಿಸಿ ಅವರಿಗೆ ಗೌರವ ಸಲ್ಲಿಸಲಿಲ್ಲ. ಈ ಹಿನ್ನೆಲೆ ಬಿಜೆಪಿ ಪರವಾಗಿ 10 ವರ್ಷಗಳ ಕಾಲ ದುಡಿದ ಅವರ ಸೇವೆಯನ್ನು ಬಿಜೆಪಿ ಮರೆಯಿತು.

ಕಳೆದ ಲೋಕಸಬಾ ಚುನಾವಣೆಯಲ್ಲೂ ಬಿಜೆಪಿ ಅವರಿಗೆ ಟಿಕೆಟ್ ನೀಡದೆ ವಂಚಿಸಿತು. ಪ್ರಸಕ್ತವಾಗಿ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲೂ ಅವರ ಪತ್ನಿಗೆ ಪಕ್ಷದ ವತಿಯಿಂದ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಅವರ ಪತ್ನಿ ವಾಣಿ ಶಿವರಾಂಗೆ ಟಿಕೆಟ್ ನೀಡಲಿಲ್ಲ. ಕೊನೆ ಪಕ್ಷ ಅವರ ಸಮ್ಮುಖದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಸ್ಥಾನ, ಮಾನ ನೀಡುವ ಕುರಿತು ಚರ್ಚಿಸದೆ ಕಡೆಗಣಿಸಲಾಯಿತು. ಈ ಹಿನ್ನೆಲೆ ಅಂದು ದುಃಖತಪ್ತರಾದ ವಾಣಿ ಶಿವರಾಂ ಅವರ ಬೆಂಬಲಿಗರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಎಚ್.ಸಿ. ಮಹದೇವಪ್ಪ ಅವರು, ಶಿವರಾಂ ಈ ಹಿಂದೆ ಕಾಂಗ್ರೆಸ್ಸ್‌ನಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಅವರ ಪತ್ನಿ ವಾಣಿ ಶಿವರಾಂ ಅವರ ಬೆಂಬಲಕ್ಕೆ ನಿಂತ ಹಿನ್ನೆಲೆ ಅವರು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಹಿನ್ನೆಲೆ ಚಾ.ನಗರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಛಲವಾದಿ ಮಹಾಸಭೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಬಿಜೆಪಿಯ ರೈತ ವಿರೋಧಿ ನೀತಿ, ಹಿರಿಯ ನಾಯಕ ಕೆ.ಶಿವರಾಂ ಅವರ ಕಡೆಗಣನೆ, ಬೆಲೆ ಏರಿಕೆ, ರೈತರ ಖಾತೆಗೆ 15ಲಕ್ಷ ರು. ಜಮಾ ಸೇರಿದಂತೆ ನುಡಿದಂತೆ ನಡೆಯದ ಕೇಂದ್ರ ಸರ್ಕಾರದ ವಿರುದ್ಧವಾಗಿ ನಾವು ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದರು.