ಚಳಕಾಪೂರ ಕಲ್ಯಾಣ ಮಂಟಪ ಕಾಮಗಾರಿ ಕಳಪೆ: ತನಿಖೆಗೆ ಆಗ್ರಹ

| Published : Feb 16 2024, 01:54 AM IST

ಚಳಕಾಪೂರ ಕಲ್ಯಾಣ ಮಂಟಪ ಕಾಮಗಾರಿ ಕಳಪೆ: ತನಿಖೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿ ತಾಲೂಕಿನ ಚಳಕಾಪೂರದಲ್ಲಿ ಕಳಪೆ ಮಟ್ಟದ ಕಲ್ಯಾಣ ಮಂಟಪದ ಕಾಮಗಾರಿ ನಡೆಯುತ್ತಿದ್ದು ತನಿಖೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕ ಕನ್ನಡ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಭಾಲ್ಕಿ: ತಾಲೂಕಿನ ಚಳಕಾಪೂರ ಹನುಮನ ದೇವಾಲಯದಲ್ಲಿ ಕಲ್ಯಾಣ ಮಂಟಪ ಕಟ್ಟುತ್ತಿದ್ದು, ಕಲ್ಯಾಣ ಮಂಟಪಕ್ಕೆ ಒಟ್ಟು 2.15 ಕೋಟಿ ರು. ಅನುದಾನವಿದ್ದು, ಇಲ್ಲಿಯವರೆಗೆ 1.74 ಕೋಟಿ ರು. ಬಿಡುಗಡೆ ಆಗಿದೆ. ಆದರೆ, ಕಲ್ಯಾಣ ಮಂಟಪ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಜಿಲ್ಲಾಡಳಿತಕ್ಕೆ ಕನ್ನಡ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಕಾಮಗಾರಿಯಲ್ಲಿ ಸಿಮೆಂಟ್, ರೇತಿ, ಇಟ್ಟಿಗೆ, ಸ್ಟೀಲ್ ಕೂಡ ಕಳಪೆ ಮಟ್ಟದಲ್ಲಿ ಕೂಡಿಸುತ್ತಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪವು ಬಿರುಕು ಬಿಡುವುದರಲ್ಲಿ ಯಾವುದೆ ಸಂದೇಹ ಇರುವುದಿಲ್ಲ.

ಕೂಡಲೇ ಈ ಕುರಿತು ತನಿಖೆ ಕೈಕೊಂಡು ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಸುಭಾಷ ಕೆನೆಡೆ, ಜಿಲ್ಲಾ ಉಪಾಧ್ಯಕ್ಷ ಸಚಿನ ಹೆಗ್ಗೆ, ಸೋಮು ಸ್ವಾಮಿ, ಸಾಗರ ಡಿ.ಕೆ ಇದ್ದರು.