ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಮೈಸೂರು ಡಿಪೋ ಮುಚ್ಚದಿರಿ

| Published : Aug 15 2025, 01:00 AM IST

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಮೈಸೂರು ಡಿಪೋ ಮುಚ್ಚದಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸುಮಾರು 50 ವರ್ಷಗಳಿಂದ ಇರುವ ನಮ್ಮ ಮೈಸೂರು ಡಿಪೋವನ್ನು ಮುಚ್ಚುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿರುವ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಡಿಪೋವನ್ನು ಮುಚ್ಚದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಇಂಡಿಯನ್ ಆಯಿಲ್ ಡೀಲರ್ಸ್ ಆಸೋಸಿಯೇಷನ್ ಪದಾಧಿಕಾರಿಗಳು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮೈಸೂರು -ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸುಮಾರು 50 ವರ್ಷಗಳಿಂದ ಇರುವ ನಮ್ಮ ಮೈಸೂರು ಡಿಪೋವನ್ನು ಮುಚ್ಚುತ್ತಿದ್ದಾರೆ, ಇದರಿಂದಾಗಿ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ತುಮಕೂರು, ರಾಮನಗರದಲ್ಲಿರುವ 514 ಡೀಲರ್‌ ಗಳಿಗೆ ತೊಂದರೆಯಾಗುತ್ತದೆ ಮತ್ತು ಸುಮಾರು 5 ಸಾವಿರ ಮಂದಿ ಉದ್ಯೋಗಿಗಳಿಗೆ ತೊಂದರೆ ಆಗುತ್ತದೆ ಎಂದು ಡೀಲರ್ಸ್‌ ಅಸೋಸಿಯೇಷನ್‌ ಕಾರ್ಯದರ್ಶಿ ರಂಜಿತ್ ಹೆಗಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಜಿ. ಶಿವಕುಮಾರ್, ಎಚ್.ಕೆ. ರಮೇಶ್ ತಿಳಿಸಿದ್ದಾರೆ.