ಪಟ್ಟಣದ ಮಹದೇಶ್ವರ ಕಾಲೇಜಿನಲ್ಲಿ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ 16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಚಾಮರಾಜನಗರ ತಂಡ ಪ್ರಥಮ ಸ್ಥಾನಗಳಿಸಿದೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಮಹದೇಶ್ವರ ಕಾಲೇಜಿನಲ್ಲಿ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ 16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಚಾಮರಾಜನಗರ ತಂಡ ಪ್ರಥಮ ಸ್ಥಾನಗಳಿಸಿದೆ.ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಕೊಳ್ಳೇಗಾಲದ ಎಂಜಿಎಸ್‌ವಿ ಬಾಸ್ಕೆಟ್ ಬಾಲ್ ಕ್ಲಬ್ ತಂಡ ಪಡೆದುಕೊಂಡಿದ್ದು,
ತೃತೀಯ ಸ್ಥಾನವನ್ನು ಗುಂಡ್ಲುಪೇಟೆ ಕ್ಲಬ್ ತಂಡ, 4ನೇ ಸ್ಥಾನವನ್ನು ಕೊಳ್ಳೇಗಾಲದ ಮಹದೇಶ್ವರ ಕಾಲೇಜು ತಂಡ ಪಡೆದುಕೊಂಡಿದೆ.ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗುಂಡ್ಲುಪೇಟೆ ಕ್ಲಬ್ ತಂಡ ಗಳಿಸಿದ್ದು, ದ್ವಿತೀಯ ಸ್ಥಾನವನ್ನು ಕೊಳ್ಳೇಗಾಲದ ಮಹದೇಶ್ವರ ಬಾಸ್ಕೆಟ್ ಬಾಲ್ ಕ್ಲಬ್ ಪಡೆದುಕೊಂಡಿದೆ. ಅದೇ ರೀತಿಯಲ್ಲಿ ತೃತೀಯ ಸ್ಥಾನವನ್ನು ಎಂಜಿಎಸ್‌ವಿ ಬಾಸ್ಕೆಟ್ ಬಾಲ್ ಕ್ಲಬ್ ತನ್ನದಾಗಿಸಿಕೊಂಡಿದೆ.ವಿಜೇತ ತಂಡಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು, ನಾಮ ನಿರ್ದೇಶಿತ ಸದಸ್ಯ ದೇವಾನಂದ್ ಬಹುಮಾನ ವಿತರಿಸಿದರು.ಈ ವೇಳೆ ಮಹಮ್ಮಸ್ ಮತೀನ್, ಚಾಮರಾಜನಗರ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ದೊರೆರಾಜು, ಉಪಾಧ್ಯಕ್ಷ ಮಹೇಶ್ ಕುಮಾರ್, ಕಾರ್ಯದರ್ಶಿ ಸುಮನ್ ಇನ್ನಿತರಿದ್ದರು.--5ಕೆಜಿಎಲ್ 12ಕೊಳ್ಳೇಗಾಲದ ಮಹದೇಶ್ವರ ಕಾಲೇಜಿನಲ್ಲಿ ಬಾಸ್ಕೆಟ್ ಬಾಲ್ ಪಂದ್ಯಾವಳಿ ಜರುಗಿತು.