ಚಾಮರಾಜನಗರ ಕಲಾವಿದರ ಗಟ್ಟಿ ನೆಲೆ: ಕೃಷ್ಣಮೂರ್ತಿ

| Published : Nov 25 2025, 02:15 AM IST

ಚಾಮರಾಜನಗರ ಕಲಾವಿದರ ಗಟ್ಟಿ ನೆಲೆ: ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲೆ ಕಲೆಗಳ ತವರೂರಾಗಿದೆ. ಜಾನಪದ ಸೊಗಡಿನ ತಾಯಿ ನೆಲೆಯಾಗಿದೆ. ಇಲ್ಲಿ ಪ್ರತಿ ತಾಲೂಕಿನಲ್ಲೂ ಹೆಜ್ಜೆಹೆಜ್ಜೆಗೂ ಕಲಾವಿದರು ಸಿಗುತ್ತಾರೆ. ಇಂತಹ ನೆಲದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ಅರ್ಥಗರ್ಭಿತವಾಗಿರುತ್ತವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರುಚಾಮರಾಜನಗರ ಜಿಲ್ಲೆ ಕಲೆಗಳ ತವರೂರಾಗಿದೆ. ಜಾನಪದ ಸೊಗಡಿನ ತಾಯಿ ನೆಲೆಯಾಗಿದೆ. ಇಲ್ಲಿ ಪ್ರತಿ ತಾಲೂಕಿನಲ್ಲೂ ಹೆಜ್ಜೆಹೆಜ್ಜೆಗೂ ಕಲಾವಿದರು ಸಿಗುತ್ತಾರೆ. ಇಂತಹ ನೆಲದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ಅರ್ಥಗರ್ಭಿತವಾಗಿರುತ್ತವೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಲಾರಾಧನೆ ಸಾಂಸ್ಕೃತಿಕ ವೇದಿಕೆಯ ವತಿಯಿಂದ 3 ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ನಡೆದ ಗಾನಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಕಲಾವಿದರಿದ್ದಾರೆ. ಇಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ, ಮಲೆಮಹದೇಶ್ವರ, ಬಿಳಿಗಿರಿರಂಗನಾಥಸ್ವಾಮಿಯ ಜಾನಪದ ಕಾವ್ಯಗಳು ಇಲ್ಲಿನ ಅನೇಕ ಗ್ರಾಮೀಣ ಪ್ರತಿಭೆಗಳ ನಾಲಿಗೆ ಮೇಲೆ ನಿರರ್ಗಗಳವಾಗಿ ಹರಿಯುತ್ತವೆ. ಈ ಸಂಸ್ಕೃತಿಯಲ್ಲೇ ಹುಟ್ಟು ಪಡೆದ ಕಲಾವಿದರಿಗೆ ಇದು ರಕ್ತಗತವಾಗಿ ಬಂದಿರುತ್ತದೆ. ಅಲ್ಲದೆ ಮಹಿಳೆಯರೂ ಕೂಡ ಹಿಂದೆ ಬಿದ್ದಿಲ್ಲ, ಸೋಬಾನೆಪದ, ಜಾನಪದ ಗೀತೆಗಳ ಅನೇಕ ಸಾಧಕ ಮಹಿಳೆಯರು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದರು.

ಕಲಾರಾಧನೆ ಸಾಂಸ್ಕೃತಿಕ ವೇದಿಕೆಯು ಯರಗಂಬಳ್ಳಿಯ ಕಲಾವಿದ ದಿ. ಶಿವಣ್ಣರವರ ಸ್ಮರಣಾರ್ಥವಾಗಿ ಅವರ ಪುತ್ರ ಆದರ್ಶ ನೇತೃತ್ವದಲ್ಲಿ ಅವರ ತಂಡ ಆಯೋಜಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.ಮುಖಂಡ ವೆಂಕಟರಮಣಪಾಪು ಮಾತನಾಡಿ, ಇಡೀ ರಾಜ್ಯದಲ್ಲಿ ಏಕೈಕ ಚಿಕ್ಕ ತಾಲೂಕು ಯಳಂದೂರಾಗಿದೆ. ಇಲ್ಲೂ ಕೂಡ ಅನೇಕ ಕಲಾವಿದರ ಆಗಿ ಹೋಗಿದ್ದಾರೆ. ಪಟ್ಟಣದ ಚಿಕ್ಕದಾದರೂ ಇದು ಐತಿಹಾಸಿಕವಾಗಿ ರಾಜ್ಯದಲ್ಲೇ ಪ್ರಸಿದ್ಧಿಯನ್ನು ಪಡೆದಿದೆ ಎಂದರು.

ಈ ಪಟ್ಟಣವು ಚಿಕ್ಕದಾಗಿದೆ. ಇಲ್ಲಿ ನೀರಾವರಿ ಜಮೀನು ಹೆಚ್ಚಿರುವ ಕಾರಣ ಇದು ಬೆಳೆಯಲು ಸಾಧ್ಯವಾಗಿಲ್ಲ. ಈಗಿರುವ ಶಾಸಕರು ಪಟ್ಟಣದ ಹೊರವಲಯದಲ್ಲಿ ಜಮೀನು ಖರೀದಿಸಿ ಇಲ್ಲಿ ಉಪ ನಗರವನ್ನು ನಿರ್ಮಾಣ ಮಾಡುವ ಮೂಲಕ ಪಟ್ಟಣವನ್ನು ಇನ್ನಷ್ಟು ವಿಶಾಲಗೊಳಿಸಲು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಮಾಜಿ ಶಾಸಕರಾದ ಎನ್. ಮಹೇಶ್, ಜಿ.ಎನ್. ನಂಜುಂಡಸ್ವಾಮಿ ಮಾತನಾಡಿದರು. ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಮುಖಂಡ ಕಿನಕಹಳ್ಳಿ ರಾಚಯ್ಯ, ಕಂದಹಳ್ಳಿ ನಂಜುಂಡಸ್ವಾಮಿ, ಮುಜಾಹಿದ್ ಉಲ್ಲಾ, ಹೊನ್ನೂರು ನಿರಂಜನ್ ಉಪಪ್ರಾಂಶುಪಾಲ ನಂಜುಂಡಯ್ಯ, ಜೆ. ಶ್ರೀನಿವಾಸ್, ಲೋಕೇಶ್, ಕೇಶವಮೂರ್ತಿ, ಕಲಾರಾಧನೆ ಸಾಂಸ್ಕೃತಿಕ ವೇದಿಕೆಯ ಆದರ್ಶ್, ಅನಿಲ್‌ಕುಮಾರ್, ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.